ಭಾನುವಾರ, ಜೂಲೈ 12, 2020
28 °C

ಮ್ಯೂಚುವಲ್‌ ಫಂಡ್ಸ್‌ ಮೇಲೆ ಇಂದಿನಿಂದ ಮುದ್ರಾಂಕ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮ್ಯೂಚುವಲ್‌ ಫಂಡ್‌ಗಳ ಖರೀದಿ ಮೇಲೆ ಜುಲೈ 1ರಿಂದ ಮುದ್ರಾಂಕ ಶುಲ್ಕ ಅನ್ವಯವಾಗಲಿದೆ.

ಈ ಶುಲ್ಕವು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತ ವರ್ಗಾವಣೆ ಯೋಜನೆಗಳಿಗೂ  (ಎಸ್‌ಟಿಪಿ) ಅನ್ವಯವಾಗಲಿದೆ. ಯುನಿಟ್ಸ್‌ಗಳನ್ನು ಮರಳಿಸಿ ಹಣ ಮರಳಿ ಪಡೆಯುವುದಕ್ಕೆ ಅನ್ವಯಗೊಳ್ಳುವುದಿಲ್ಲ.

ಶೇ 0.005ರಷ್ಟು ಸ್ಟ್ಯಾಂಪ್‌ ಡ್ಯೂಟಿಯು ಷೇರು ಮತ್ತು ಸಾಲ ನಿಧಿ ಎಂಎಫ್‌ಗಳಿಗೆ ಅನ್ವಯವಾಗಲಿದೆ. ಡಿಮ್ಯಾಟ್‌ ಖಾತೆಗಳ ನಡುವೆ ವರ್ಗಾವಣೆಯಾಗುವ ಎಂಎಫ್‌ಗಳಿಗೆ ಶೇ 0.015ರಷ್ಟು ಡ್ಯೂಟಿ ಅನ್ವಯವಾಗಲಿದೆ. 90 ದಿನ ಅಥವಾ ಅದಕ್ಕಿಂತ ಕಡಿಮೆ ದಿನಗಳ ಅಲ್ಪಾವಧಿ ಖರೀದಿಗೆ ಮುದ್ರಾಂಕ ಶುಲ್ಕವು ಹೆಚ್ಚಿನ ಪರಿಣಾಮ ಬೀರಲಿದೆ.

ಜನವರಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ತೆರಿಗೆಯು ಎರಡು ಬಾರಿ ಮುಂದೂಡಿಕೆಯಾಗಿತ್ತು.

ಉದಾಹರಣೆಗೆ ₹ 1 ಲಕ್ಷ ಮೊತ್ತದ ಮ್ಯೂಚುವಲ್‌ ಫಂಡ್‌ ಖರೀದಿಗೆ ವಹಿವಾಟು ಶುಲ್ಕವು ₹ 100 ಇರಲಿದೆ. ನಿವ್ವಳ ಖರೀದಿಯು ₹ 1,00,100 ಆಗಿರಲಿದೆ. ₹ 1 ಲಕ್ಷ ಮೊತ್ತಕ್ಕೆ ಶೇ 0.005 ದರದಲ್ಲಿ ಸ್ಟ್ಯಾಂಪ್‌ ಡ್ಯೂಟಿ ಮೊತ್ತ ₹ 5 ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು