ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಲೀಟರ್‌ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ

Published 29 ಡಿಸೆಂಬರ್ 2023, 16:30 IST
Last Updated 29 ಡಿಸೆಂಬರ್ 2023, 16:30 IST
ಅಕ್ಷರ ಗಾತ್ರ

ನವದೆಹಲಿ: ಮೊಲಾಸಿಸ್‌–ಸಿ (ಕಾಕಂಬಿ) ಬಳಸಿ ಉತ್ಪಾದಿಸುವ ಒಂದು ಲೀಟರ್ ಎಥೆನಾಲ್‌ಗೆ ₹6.87 ಪ್ರೋತ್ಸಾಹಧನ ನೀಡುವುದಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಶುಕ್ರವಾರ ತಿಳಿಸಿವೆ.

ಕಂಪನಿಗಳ ಈ ನಿರ್ಧಾರವನ್ನು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ಸ್ವಾಗತಿಸಿದ್ದು, ಮುಂದಿನ ದಿನಗಳನ್ನು ಬೆಲೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಹೇಳಿದೆ.

‘ಈ ಪ್ರೋತ್ಸಾಹಧನ ಲಭಿಸಿದರೆ ಒಂದು ಲೀಟರ್‌ ಎಥೆನಾಲ್‌ ಬೆಲೆ ₹56.28 ಆಗಲಿದೆ. ಕಂಪನಿಗಳ ನಿರ್ಧಾರವು ಪ್ರಶಂಸನೀಯವಾಗಿದೆ’ ಎಂದು ಸಂಘದ ಅಧ್ಯಕ್ಷ ಎಂ. ಪ್ರಭಾಕರ್‌ ರಾವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT