ಗುರುವಾರ , ಜುಲೈ 16, 2020
24 °C

ಟಾಟಾ ಎಐಎ ಹೆಚ್ಚುವರಿ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಾಟಾ ಎಐಎ ಜೀವ ವಿಮೆ ಕಂಪನಿಯು ತನ್ನ ಎಲ್ಲ ಪಾಲಿಸಿದಾರರಿಗೆ ‘ಕೋವಿಡ್‌–19’ಗೆ ಸಂಬಂಧಿಸಿದಂತೆ ₹ 5 ಲಕ್ಷದ ಹೆಚ್ಚುವರಿ ಪ್ರಯೋಜನ ಕಲ್ಪಿಸಿದೆ.

ಇದಕ್ಕಾಗಿ ಪಾಲಿಸಿದಾರರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಪಾಲಿಸಿದಾರರು ‘ಕೋವಿಡ್‌–19’ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಈ ₹ 5 ಲಕ್ಷದ ಹೆಚ್ಚುವರಿ ವಿಮೆ ಪರಿಹಾರ ಒದಗಿಸಲಾಗುವುದು.  ಈ ವರ್ಷದ ಜೂನ್‌ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿ ಇರಲಿದೆ.

ಕಂಪನಿಯ ಎಲ್ಲ ಸಕ್ರಿಯ ಏಜೆಂಟರ ಅವಲಂಬಿತರು ‘ಕೋವಿಡ್‌–19’ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚಕ್ಕೆ ₹ 25 ಸಾವಿರ ನೆರವು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು