ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಾಟಾ ಕಾಫಿ’ ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ: ಪುನಿತ್ ದಾಸ್

Published 27 ಸೆಪ್ಟೆಂಬರ್ 2023, 0:12 IST
Last Updated 27 ಸೆಪ್ಟೆಂಬರ್ 2023, 0:12 IST
ಅಕ್ಷರ ಗಾತ್ರ

ಪೊಲ್ಲಿಬೆಟ್ಟ (ಕೊಡಗು): ವೈವಿಧ್ಯಮಯ ಬ್ರ್ಯಾಂಡೆಡ್‌ ಕಾಫಿ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‌, ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಿದೆ. ವಾರ್ಷಿಕ ₹13,783 ಕೋಟಿ ಮೊತ್ತದ ವಹಿವಾಟು ನಡೆಸುತ್ತಿದೆ ಎಂದು ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ಯಾಕೇಜ್ಡ್ ಪಾನೀಯಗಳ ವಿಭಾಗದ ಅಧ್ಯಕ್ಷ ಪುನಿತ್ ದಾಸ್ ತಿಳಿಸಿದ್ದಾರೆ.

ಅಕ್ಟೋಬರ್‌ 1ರಂದು ಅಂತರರಾಷ್ಟ್ರೀಯ ಕಾಫಿ ದಿನ ಇದ್ದು, ಅದರ ಪೂರ್ವಭಾವಿಯಾಗಿ ಕೊಡಗಿನ ತೋಟದಲ್ಲಿ ಆಯೋಜಿಸಿದ್ದ ‘ಟಾಟಾ ಕಾಫಿ’ಯ ಯಶೋಗಾಥೆಯನ್ನು ಮೆಲುಕು ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಉತ್ಪನ್ನಗಳಲ್ಲಿ ಶೇ 80ರಿಂದ 85ರಷ್ಟಿರುವ ಇನ್‍ಸ್ಟಂಟ್ ಕಾಫಿ ವಿಭಾಗದ ತ್ವರಿತ ಬೆಳವಣಿಗೆಯು ಮಾರುಕಟ್ಟೆ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

‘ಒಂದು ಬ್ರ್ಯಾಂಡ್‌ನಿಂದ ಆರಂಭವಾದ ಪಯಣವು ವಿಭಿನ್ನ ಬಗೆಯ ಕಾಫಿ ಉತ್ಪನ್ನಗಳವರೆಗೆ ಸಾಗಿದ್ದು, ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದೆ. ಭಾರತದ 20 ಕೋಟಿಗೂ ಅಧಿಕ ಮನೆಗಳಿಗೆ ಕಂಪನಿಯ ಉತ್ಪನ್ನಗಳು ತಲುಪಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT