ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಅತಿಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿರುವುದು ಟಾಟಾ ಸಮೂಹದ ಕಂಪನಿಗಳಲ್ಲಿ.

ಎಲ್ಐಸಿಯಿಂದ ಅತಿಹೆಚ್ಚು ಹೂಡಿಕೆ ಆಕರ್ಷಿಸಿರುವ ಕಂಪನಿಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಇದೆ. ಮೂರನೆಯ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ಒದಗಿಸಿದ್ದಾರೆ. ಅದಾನಿ ಸಮೂಹದಲ್ಲಿ ಎಲ್ಐಸಿ ಒಟ್ಟು ₹47,633 ಕೋಟಿ ಹೂಡಿಕೆ ಮಾಡಿದೆ.

ಎಲ್ಐಸಿಯ ಹೂಡಿಕೆಯು ಒಟ್ಟು 35 ಕಂಪನಿಗಳಲ್ಲಿ ತಲಾ ₹5 ಸಾವಿರ ಕೋಟಿಗಿಂತ ಹೆಚ್ಚಿದೆ. ಈ 35 ಕಂಪನಿಗಳಲ್ಲಿ ಎಲ್ಐಸಿ ಹೂಡಿಕೆಯ ಒಟ್ಟು ಮೌಲ್ಯ ₹7.87 ಲಕ್ಷ ಕೋಟಿ. ಈ ಪೈಕಿ ಮೊದಲ ಐದು ಕಂಪನಿಗಳಲ್ಲಿನ ಹೂಡಿಕೆಯ ಮೌಲ್ಯವು ₹3.23 ಲಕ್ಷ ಕೋಟಿಯಷ್ಟಿದೆ.

ಎಲ್ಐಸಿಯು ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿರುವ ಹೂಡಿಕೆ ನೀತಿಯನ್ನು ಪಾಲಿಸುತ್ತಿದೆ. ಕಂಪನಿಗಳ ಷೇರುಗಳು ಹಾಗೂ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ವಿಚಾರವಾಗಿ ಸಿಇಒ ಮತ್ತು ಎಂ.ಡಿ., ವಿವಿಧ ಎಂ.ಡಿ.ಗಳು ಹಾಗೂ ಸ್ವತಂತ್ರ ನಿರ್ದೇಶಕರು ಇರುವ ಉಪ ಸಮಿತಿಯು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.

ಪ್ರಮಾಣಿತ ಕಾರ್ಯ ವಿಧಾನ (ಎಸ್ಒಪಿ) ಅನುಸರಿಸಿ ಎಲ್ಲ ಹೂಡಿಕೆ ಕೆಲಸಗಳನ್ನು ಮಾಡಲಾಗುತ್ತದೆ. ಈ ಎಸ್ಒಪಿಯನ್ನು ಪ್ರತಿ ವರ್ಷ ಪರಿಶೀಲಿಸಲಾಗುತ್ತದೆ, ಅಗತ್ಯ ಕಂಡುಬಂದಾದ ಅದನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.