ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಜಲಜನಕ ಇಂಧನ ಪೂರಿತ ಟ್ರಕ್ಗಳ ಪ್ರಾಯೋಗಿಕ ಸಂಚಾರಕ್ಕೆ ಟಾಟಾ ಮೋಟರ್ಸ್ ಮಂಗಳವಾರ ಚಾಲನೆ ನೀಡಿದೆ.

ಪ್ರಾಯೋಗಿಕ ಸಂಚಾರದ ಅವಧಿ 24 ತಿಂಗಳಾಗಿದ್ದು, 16 ಅತ್ಯಾಧುನಿಕ ಟ್ರಕ್ಗಳು ಸಂಚರಿಸಲಿವೆ. ಈ ಟ್ರಕ್ಗಳು ಜಲಜನಕದ ಆಂತರಿಕ ದಹನಕಾರಿ ಎಂಜಿನ್ ಮತ್ತು ಇಂಧನ ಕೋಶ ತಂತ್ರಜ್ಞಾನವನ್ನು ಹೊಂದಿವೆ.

ಮುಂಬೈ, ಪುಣೆ, ದೆಹಲಿ, ಸೂರತ್, ವಡೋದರಾ, ಜಮ್ಶೆಡ್ಪುರ ಮತ್ತು ಕಳಿಂಗನಗರದ ಪ್ರಮುಖ ಮಾರ್ಗಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ.

ದೀರ್ಘಕಾಲದ ಪ್ರಯಾಣಕ್ಕೆ ವಿದ್ಯುತ್ಚಾಲಿತ ಬ್ಯಾಟರಿ ತಂತ್ರಜ್ಞಾನದ ಬಳಕೆ ಲಾಭದಾಯಕವಾಗಿ ಕಾಣಿಸುತ್ತಿಲ್ಲ. ಹಾಗಾಗಿ, ಬ್ಯಾಟರಿಯಲ್ಲಿ ಕೆಲ ಸುಧಾರಣೆ ಮಾಡಲಾಗುತ್ತಿದೆ. ಇದೇ ವೇಳೆ ಜಲಜನಕ ಇಂಧನ ಪೂರಿತ ವಾಹನಗಳ ಮೇಲೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಟಾಟಾ ಮೋಟರ್ಸ್ನ ಕಾರ್ಯ ನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.