ಶನಿವಾರ, ಏಪ್ರಿಲ್ 1, 2023
23 °C

ಅಲ್ಟ್ರೋಜ್‌, ನೆಕ್ಸಾನ್‌ ಡಾರ್ಕ್‌ ಎಡಿಷನ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟಾಟಾ ಮೋಟರ್ಸ್‌ ಕಂಪನಿಯು ಆಲ್ಟ್ರೋಜ್‌, ನೆಕ್ಸಾನ್‌ ಮತ್ತು ನೆಕ್ಸಾನ್‌ ಇ.ವಿ. ಮಾದರಿಯ ವಾಹನಗಳ ‘ಡಾರ್ಕ್‌ ಎಡಿಷನ್‌’ ಆವೃತ್ತಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಡಾರ್ಕ್‌ ಎಡಿಷನ್‌ ಆಯ್ಕೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.

ಆಲ್ಟ್ರೋಜ್‌ ಡಾರ್ಕ್‌ ಬೆಲೆಯು ₹ 8.71 ಲಕ್ಷದಿಂದ ಆರಂಭ ಆಗಲಿದೆ. ನೆಕ್ಸಾನ್‌ ಟ್ರಿಮ್‌ ಬೆಲೆ ₹ 10.41 ಲಕ್ಷದಿಂದ, ನೆಕ್ಸಾನ್‌ ಇ.ವಿ. ಬೆಲೆ ₹ 15.99 ಲಕ್ಷದಿಂದ ಆರಂಭ ಆಗಲಿದೆ.

ಹ್ಯಾರಿಯರ್‌ನ ಪರಿಷ್ಕೃತ ಡಾರ್ಕ್‌ ಎಡಿಷನ್‌ ಅನ್ನೂ ಕಂಪನಿಯ ಪರಿಚಯಿಸಿದ್ದು, ಇದರ ಆರಂಭಿಕ ಬೆಲೆ ₹ 18.04 ಲಕ್ಷ ಇದೆ (ದೆಹಲಿ ಎಕ್ಸ್‌ಷೋರೂಂ).

ಕಂಪನಿಯು 2019ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಹ್ಯಾರಿಯರ್‌ನ ಡಾರ್ಕ್‌ ಎಡಿಷನ್‌ ಪರಿಚಯಿಸಿತು. ಅದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನ ಸಿಗುತ್ತಿರುವುದು ಇತರೆ ಮಾದರಿಗಳ ಡಾರ್ಕ್ ಎಡಿಷನ್‌ ಬಿಡುಗಡೆ ಮಾಡಲು ಉತ್ತೇಜಿಸಿತು ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು