ನವದೆಹಲಿ: ಟಾಟಾ ಸಮೂಹದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಘಟಕವು, ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಐದು ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ.
ಈ ಸಂಬಂಧ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಜೊತೆಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ.
ಈ ವರ್ಷದ ಅಂತ್ಯದೊಳಗೆ ಕಂಪನಿಯಿಂದ 1.2 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟದ ಗುರಿ ಹೊಂದಲಾಗಿದೆ. ಈ ವಾಹನಗಳ ಮಾಲೀಕರಿಗೆ ಅನುಕೂಲ ಕಲ್ಪಿಸಲು ಹಾಗೂ ಎಚ್‌ಪಿಸಿಎಲ್‌ನ ನೆಟ್‌ವರ್ಕ್ಸ್‌ನ ವಿಸ್ತರಣೆಗೆ ಪೂರಕವಾಗಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದೆ.
ಸದ್ಯ ದೇಶದಾದ್ಯಂತ 21,500ಕ್ಕೂ ಹೆಚ್ಚು ಎಚ್‌ಪಿಸಿಎಲ್‌ನ ಪೆಟ್ರೋಲ್ ಬಂಕ್‌ಗಳಿವೆ.