ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸನ್ಸ್‌ ಪಾಲಾಗಲಿದೆ ಏರ್ ಇಂಡಿಯಾ: ವರದಿ

Last Updated 1 ಅಕ್ಟೋಬರ್ 2021, 7:10 IST
ಅಕ್ಷರ ಗಾತ್ರ

ನವದೆಹಲಿ:ಸಾಲದ ಸುಳಿಯಲ್ಲಿ ಸಿಲುಕಿರುವ ‘ಏರ್ ಇಂಡಿಯಾ’ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ‘ಟಾಟಾ ಸನ್ಸ್‌’ ಸಲ್ಲಿಸಿರುವ ಬಿಡ್‌ಗೆ ಅನುಮೋದನೆ ದೊರೆತಿದೆ ಎಂದು ವರದಿಯಾಗಿದೆ.

‘ಟಾಟಾ ಸನ್ಸ್‌’ ಸಲ್ಲಿಸಿರುವ ಬಿಡ್ ಅನ್ನು ಶಿಫಾರಸು ಮಾಡಿ ಸಲ್ಲಿಸಲಾಗಿರುವ ಪ್ರಸ್ತಾಪವನ್ನು ಸಚಿವರ ಸಮಿತಿ ಅಂಗೀಕರಿಸಿದೆ ಎಂದು ‘ಬ್ಲೂಮ್‌ಬರ್ಗ್ ಕ್ವಿಂಟ್’ ವರದಿ ಮಾಡಿದೆ.

ವರದಿಗಳ ಕುರಿತು ಪ್ರತಿಕ್ರಿಯಿಸಲು‘ಟಾಟಾ ಸನ್ಸ್‌’ ವಕ್ತಾರರು ನಿರಾಕರಿಸಿದ್ದಾರೆ. ಪ್ರತಿಕ್ರಿಯೆ ಕೋರಿ ಕಳುಹಿಸಿರುವ ಸಂದೇಶಕ್ಕೆ ಹಣಕಾಸು ಸಚಿವಾಲಯ, ‘ಏರ್ ಇಂಡಿಯಾ’ವೂ ಉತ್ತರಿಸಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಏರ್ ಇಂಡಿಯಾ’ ಕಂಪನಿಯ ಖರೀದಿಗೆ ಆಸಕ್ತಿ ತೋರಿಸಿ ಹಲವರು ಹಣಕಾಸಿನ ಬಿಡ್ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ಹೇಳಿತ್ತು.‘ಏರ್‌ ಇಂಡಿಯಾ’ ಖಾಸಗೀಕರಣಕ್ಕೆ ಹಣಕಾಸಿನ ಬಿಡ್‌ಗಳನ್ನು ವಹಿವಾಟು ಸಲಹೆಗಾರರು ಸ್ವೀಕರಿಸಿದ್ದಾರೆ. ಈಗ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಹೋಗಲಿದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಸೆಪ್ಟೆಂಬರ್ 15ರಂದು ತಿಳಿಸಿದ್ದರು.

2020ರ ಜನವರಿಯಲ್ಲಿ ಆರಂಭವಾದ ಷೇರು ಮಾರಾಟ ಪ್ರಕ್ರಿಯೆಯು ಕೋವಿಡ್–19 ಕಾರಣದಿಂದಾಗಿ ವಿಳಂಬವಾಗಿತ್ತು.‘ಏರ್‌ ಇಂಡಿಯಾ’ ಖರೀದಿಗೆ ಆರಂಭಿಕ ಹಂತದಲ್ಲಿ ಆಸಕ್ತಿ ತೋರಿಸಿದ್ದ ಕಂಪನಿಗಳ ಪೈಕಿ ಟಾಟಾ ಸಮೂಹ ಕೂಡ ಒಂದಾಗಿದೆ.‘ಏರ್‌ ಇಂಡಿಯಾ’ವನ್ನು 2007ರಲ್ಲಿ ಇಂಡಿಯನ್ ಏರ್‌ಲೈನ್ಸ್ ಜೊತೆ ವಿಲೀನ ಮಾಡಲಾಗಿತ್ತು. ಅಂದಿನಿಂದಲೂ ಇದು ನಷ್ಟ ಅನುಭವಿಸುತ್ತಿದೆ. 2019ರ ಮಾರ್ಚ್‌ 31ರ ಲೆಕ್ಕಾಚಾರದಂತೆ ‘ಏರ್‌ ಇಂಡಿಯಾ’ ಸಾಲ ₹60,074 ಕೋಟಿ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT