ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಟೆಲಿಕಾಂ ಕಂಪನಿಗಳ ಕಾರ್ಯಾಚರಣಾ ಲಾಭ ಹೆಚ್ಚಳ: ಕ್ರಿಸಿಲ್

Published 28 ಆಗಸ್ಟ್ 2023, 14:39 IST
Last Updated 28 ಆಗಸ್ಟ್ 2023, 14:39 IST
ಅಕ್ಷರ ಗಾತ್ರ

ಮುಂಬೈ: ಭಾರತದ ದೂರಸಂಪರ್ಕ ವಲಯದ ಕಂಪನಿಗಳ ಕಾರ್ಯಾಚರಣಾ ಲಾಭವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 15ರಷ್ಟು ಹೆಚ್ಚಾಗಲಿದ್ದು ₹1.2 ಲಕ್ಷ ಕೋಟಿಗೆ ತಲುಪಲಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಅಂದಾಜು ಮಾಡಿದೆ.

ಕಂಪನಿಗಳು ಪ್ರತಿ ಗ್ರಾಹಕನಿಂದ ಪಡೆಯುವ ಆದಾಯವು (ಎಆರ್‌ಪಿಯು) ಕೆಲವು ವರ್ಷಗಳಿಂದ ಇಳಿಮುಖವಾಗಿತ್ತು. ಇದು ಈ ಹಣಕಾಸು ವರ್ಷದಲ್ಲಿ ಶೇ 8–10ರವರೆಗೆ ಏರಿಕೆ ಕಾಣಲಿದ್ದು, ₹190ಕ್ಕೆ ತಲುಪಲಿದೆ. ಕಂಪನಿಗಳು ಸದ್ಯ 4ಜಿಯಿಂದ 5ಜಿ ಸೇವೆಗೆ ಗ್ರಾಹಕರನ್ನು ಬದಲಾಯಿಸುವುದರ ಕಡೆಗೆ ಗಮನ ಹರಿಸಿದ್ದು, ಅಲ್ಪಾವಧಿಯಲ್ಲಿ ಶುಲ್ಕ ಹೆಚ್ಚಿಸುವ ಸಾಧ್ಯತೆ ಕಡಿಮೆ. ಹೀಗಿದ್ದರೂ ಎಆರ್‌ಪಿಯು ಬೆಳವಣಿಗೆ ಕಾಣಲಿದೆ ಎಂದು ಸಂಸ್ಥೆಯ ಅಧಿಕಾರಿ ಮನಿಷ್‌ ಗುಪ್ತಾ ಹೇಳಿದ್ದಾರೆ.

ಹಿಂದಿನ ಹಣಕಾಸು ವರ್ಷದಲ್ಲಿ ಈ ಕಂಪನಿಗಳು ₹1.04 ಲಕ್ಷ ಕೋಟಿಯಷ್ಟು ಕಾರ್ಯಾಚರಣಾ ಲಾಭ ಗಳಿಸಿದ್ದವು ಎಂದು ಅದು ತಿಳಿಸಿದೆ. ಡೇಟಾ ಬಳಕೆಯು ಕಳೆದ ಹಣಕಾಸು ವರ್ಷದಲ್ಲಿ ತಿಂಗಳಿಗೆ 20ಜಿಬಿ ಇದ್ದಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ 23ರಿಂದ 25 ಜಿಬಿವರೆಗೆ ಏರಿಕೆ ಕಾಣಲಿದೆ. ಇದರ ಜೊತೆಗೆ ರಿಚಾರ್ಜ್‌ ಮೊತ್ತದಲ್ಲಿ ಹೊಂದಾಣಿಕೆ ಮಾಡುತ್ತಿರುವುದು ಸಹ ಕಾರ್ಯಾಚರಣಾ ಲಾಭ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT