ನವದೆಹಲಿ: ಎಸ್ಎಂಎಸ್ ಕಳುಹಿಸಿದವರು ಯಾವ ಉದ್ದೇಶಕ್ಕೆ ಅದನ್ನು ಕಳುಹಿಸಿದ್ದಾರೆ ಎಂಬುದನ್ನು ಸುಲಭವಾಗಿ ಗುರುತಿಸುವುದು ಬಳಕೆದಾರರಿಗೆ ಇನ್ನು ಮುಂದೆ ಸಾಧ್ಯವಾಗಲಿದೆ.

ಸಂದೇಶ ಕಳುಹಿಸಿದವರ ಹೆಸರಿನ ನಂತರದಲ್ಲಿ ನಿರ್ದಿಷ್ಟವಾದ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಿ, ಸಂದೇಶ ಕಳುಹಿಸಿದ ಉದ್ದೇಶ ಏನು ಎಂಬುದು ಮೊಬೈಲ್ ಬಳಕೆದಾರರಿಗೆ ಸುಲಭವಾಗಿ ತಿಳಿಯುವಂತೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳ ಪ್ರಾತಿನಿಧಿಕ ಸಂಘಟನೆಯಾಗಿರುವ ಭಾರತೀಯ ಸೆಲ್ಯುಲಾರ್ ಆಪರೇಟರ್ಗಳ ಸಂಘವು (ಸಿಒಎಐ) ಮಂಗಳವಾರ ಈ ವಿಷಯ ತಿಳಿಸಿದೆ.

ಆದರೆ, ಅನಗತ್ಯವಾದ ಸಂದೇಶಗಳನ್ನು ಬಳಕೆದಾರರಿಗೆ ಕಳುಹಿಸಿ ಕಿರಿಕಿರಿ ಉಂಟುಮಾಡುವವರು ಒಟಿಟಿ ಆ್ಯಪ್ಗಳನ್ನು ಬಳಸಿ, ಸಂದೇಶ ಕಳುಹಿಸುತ್ತಿದ್ದಾರೆ ಎಂದು ಸಿಒಎಐ ಕಳವಳ ವ್ಯಕ್ತಪಡಿಸಿದೆ. ಅವರು ಈ ರೀತಿ ಮಾಡುತ್ತಿರುವುದರಿಂದಾಗಿ ಸ್ಪ್ಯಾಮ್ ಮತ್ತು ವಂಚನೆ ಉದ್ದೇಶದ ಸಂದೇಶಗಳಿಗೆ ಕಡಿವಾಣ ಹಾಕುವ ಉದ್ದೇಶದ ಕಠಿಣ ಕ್ರಮಗಳು ನಿರರ್ಥಕವಾಗುತ್ತಿವೆ ಎಂದು ಅದು ಹೇಳಿದೆ.

‘ಎಸ್ಎಂಎಸ್ ಶೀರ್ಷಿಕೆಯಲ್ಲಿ ಇಂಗ್ಲಿಷ್ನ ನಿರ್ದಿಷ್ಟ ಅಕ್ಷರವನ್ನು ನಮೂದಿಸಿ, ಆ ಸಂದೇಶದ ಉದ್ದೇಶ ಏನು ಎಂಬುದನ್ನು ಬಳಕೆದಾರರಿಗೆ ತಿಳಿಸುವ ಕೆಲಸವನ್ನು ಎಲ್ಲ ದೂರಸಂಪರ್ಕ ಸೇವಾ ಕಂಪನಿಗಳು ಶುರು ಮಾಡಿವೆ’ ಎಂದು ಸಿಒಎಐ ಮಹಾನಿರ್ದೇಶಕ ಎಸ್.ಪಿ. ಕೊಚ್ಚರ್ ಹೇಳಿದ್ದಾರೆ.

ಇದನ್ನು ಅನುಷ್ಠಾನಕ್ಕೆ ತಂದಿರುವ ಕಾರಣಕ್ಕೆ ಪಾರದರ್ಶಕತೆ ಹೆಚ್ಚಾಗಿದೆ, ಗ್ರಾಹಕರ ಹಿತ ಕಾಯಲು ಆಗಿದೆ. ಬಳಕೆದಾರರಿಗೆ ತಮಗೆ ಬಂದಿರುವ ಸಂದೇಶವು ಯಾವುದಕ್ಕೆ ಸಂಬಂಧಿಸಿದ್ದು ಎಂಬುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಪ್ರಚಾರ ಉದ್ದೇಶದ, ಸೇವಾ ಉದ್ದೇಶದ, ವಹಿವಾಟಿಗೆ ಸಂಬಂಧಿಸಿದ ಮತ್ತು ಸರ್ಕಾರಿ ಸಂದೇಶಗಳನ್ನು ಬಳಕೆದಾರರು ಸುಲಭವಾಗಿ ಒಂದೇ ನೋಟದಲ್ಲಿ ಗುರುತಿಸಬಹುದು. ನಿಜವಾದ ವಹಿವಾಟಿನ ಉದ್ದೇಶದ ಹಾಗೂ ಸೇವಾ ಉದ್ದೇಶದ ಎಸ್ಎಂಎಸ್ಗಳನ್ನು ಕೂಡ ಸುಲಭವಾಗಿ ಗುರುತಿಸಿ, ವಂಚನೆಗೆ ಈಡಾಗುವುದನ್ನು ಕಡಿಮೆ ಮಾಡಬಹುದು’ ಎಂದು ಕೊಚ್ಚರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಸ್ಪ್ಯಾಮ್ ಸಂದೇಶ ಕಳುಹಿಸುವವರು ಹಾಗೂ ವಂಚನೆಯ ಉದ್ದೇಶ ಇರುವವರು ಸಂದೇಶ ಕಳುಹಿಸಲಿಕ್ಕಾಗಿಯೇ ಇರುವ ವಿವಿಧ ಆ್ಯಪ್ಗಳನ್ನು ಬಳಕೆ ಮಾಡಿಕೊಳ್ಳಬಹುದು. ಈ ಆ್ಯಪ್ಗಳಿಗೆ ಕಾನೂನಿನ ನಿಯಂತ್ರಣ ಇಲ್ಲ ಎಂದು ಅವರು ಹೇಳಿದ್ದಾರೆ.

ಯಾವ ಸಂದೇಶಕ್ಕೆ ಯಾವ ಅಕ್ಷರ?

ಪ್ರಚಾರದ ಉದ್ದೇಶ;ಪಿ ಸೇವಾ ಉದ್ದೇಶ;ಎಸ್ ವಹಿವಾಟಿಗೆ ಸಂಬಂಧಿಸಿದ್ದು;ಟಿ ಸರ್ಕಾರಿ ಸಂದೇಶ;ಜಿ (ಎಸ್ಎಂಎಸ್ ಸಂದೇಶದ ಶೀರ್ಷಿಕೆಯ ನಂತರ ಈ ಅಕ್ಷರಗಳು ಇದ್ದರೆ, ಅವು ಸಂದೇಶದ ಉದ್ದೇಶವನ್ನು ಹೇಳುತ್ತವೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.