ಬುಧವಾರ, ಏಪ್ರಿಲ್ 1, 2020
19 °C

ಥಾಮಸ್‌ ಕುಕ್‌ ಇಂಡಿಯಾ ಲಾಭದಾಯಕ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬ್ರಿಟನ್ನಿನ ಥಾಮಸ್ ಕುಕ್ ಪಿಎಲ್‍ಸಿ ದಿವಾಳಿ ಎದ್ದಿರುವುದಕ್ಕೂ, ಭಾರತದ ಥಾಮಸ್ ಕುಕ್ ಇಂಡಿಯಾದ
ವಹಿವಾಟಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಕಂಪನಿಯ ದೇಶಿ ವಹಿವಾಟಿನ ಮುಖ್ಯಸ್ಥ ರಾಜೀವ್ ಕಾಳೆ ಸ್ಪಷ್ಟಪಡಿಸಿದ್ದಾರೆ.

‘ಭಾರತದ ಥಾಮಸ್ ಕುಕ್ ಪ್ರತ್ಯೇಕ ಘಟಕವಾಗಿದ್ದು, ಸತತ ಲಾಭದಾಯಕ ವಹಿವಾಟು ನಡೆಸುತ್ತಿದೆ. ಥಾಮಸ್ ಕುಕ್ ಇಂಡಿಯಾದ ಶೇ 76ರಷ್ಟು ಪಾಲನ್ನು ಕೆನಡಾದ ಫೇರ್‍ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್‌ಗೆ 2012ರಲ್ಲಿಯೇ ಮಾರಾಟ ಮಾಡಲಾಗಿದೆ. ಹೀಗಾಗಿ ಥಾಮಸ್ ಕುಕ್ ಇಂಡಿಯಾ ಸ್ವತಂತ್ರ ಸಂಸ್ಥೆಯಾಗಿದೆ. ಅದರ ಹಣಕಾಸು ಪರಿಸ್ಥಿತಿ ಸುರಕ್ಷಿತವಾಗಿದೆ. ಗ್ರಾಹಕರೂ ನಮ್ಮ ಮೇಲಿಟ್ಟ ವಿಶ್ವಾಸವನ್ನು ನಾವು ಉಳಿಸಿಕೊಂಡಿದ್ದೇವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ‘ಹಬ್ಬದ ಋತು ಮತ್ತು ರಜಾದಿನಗಳಿಗೆ ಥಾಮಸ್ ಕುಕ್ ಇಂಡಿಯಾ ಹಲವು ಆಕರ್ಷಕ ಯೋಜನೆಗಳನ್ನು ಪ್ರಕಟಿಸಿದೆ.
ಯುರೋಪ್ ಮತ್ತು ಅಮೆರಿಕದ 2020ರ ಸಾಲಿನ ಪ್ಯಾಕೇಜ್‍ಗಳು ₹ 89,900ನಿಂದ ಆರಂಭವಾಗುತ್ತವೆ. ಕಂಪನಿಗೆ ಕರ್ನಾಟಕ, ಅದರಲ್ಲಿಯೂ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದೆ. ಕಂಪನಿಯ ಶೇ 20ರಷ್ಟು ಪ್ರವಾಸೋದ್ಯಮ ವಹಿವಾಟು ಕರ್ನಾಟಕದಿಂದಲೇ ಬರುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದ ಪ್ರವಾಸೋದ್ಯಮ ಶೇ 18ರಷ್ಟು ಪ್ರಗತಿ ದಾಖಲಿಸಿದೆ’ ಎಂದು ಕಂಪನಿಯ ಮಾರಾಟ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಖನ್ನಾ ತಿಳಿಸಿದ್ದಾರೆ.

‘ಪ್ರವಾಸಿಗರು ವೀಸಾ ರಹಿತ, ವೀಸಾ ಆನ್ ಅರೈವಲ್ ಅಥವಾ ಸುಲಭವಾಗಿ ವೀಸಾ ಲಭ್ಯವಾಗುವ ಸ್ಥಳಗಳಾದ ಭೂತಾನ್, ಜೋರ್ಡಾನ್, ಥಾಯ್ಲೆಂಡ್, ಇಂಡೊನೇಷ್ಯಾ, ಅಜರ್‍ಬೈಜಾನ್ ಮತ್ತು ಮಾಲ್ಡೀವ್ಸ್ ಪ್ರವಾಸಗಳನ್ನು ಹೆಚ್ಚಾಗಿ ಬಯಸುತ್ತಾರೆ. ಆಗ್ನೇಯ ಏಷ್ಯಾ, ಹಾಂಗ್‌ಕಾಂಗ್, ಯುರೋಪ್, ದುಬೈ ಮತ್ತು ಆಸ್ಟ್ರೆಲಿಯಾಕ್ಕೆ ಕನ್ನಡಿಗರೇ ಒಳಗೊಂಡ ತಂಡ ಪ್ರವಾಸಗಳನ್ನು ವಿಶೇಷವಾಗಿ ಆಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು