ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ: ಭಾರತದಲ್ಲಿ ಯಾರಿಸ್ ಮಾರಾಟ ಸ್ಥಗಿತ

Last Updated 27 ಸೆಪ್ಟೆಂಬರ್ 2021, 13:38 IST
ಅಕ್ಷರ ಗಾತ್ರ

ನವದೆಹಲಿ: ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ತನ್ನ ಮಧ್ಯಮ ಗಾತ್ರದ ಸೆಡಾನ್ ಕಾರು ‘ಯಾರಿಸ್‌’ ಮಾರಾಟವನ್ನು ಭಾರತದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಿದೆ. ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಸೋಮವಾರ ಹೇಳಿದೆ.

ಕಂಪನಿಯು ಯಾರಿಸ್‌ ಮಾದರಿಯನ್ನು 2018ರ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಬೆಲೆಯು ₹ 8.75 ಲಕ್ಷದಿಂದ ಆರಂಭವಾಗಿ ₹ 14.07 ಲಕ್ಷದವರೆಗೆ (ಎಕ್ಸ್‌–ಷೋರೂಂ) ಇತ್ತು. ಈ ಕಾರು, ಹೋಂಡಾ ಸಿಟಿ, ಹುಂಡೈ ವರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಜೊತೆ ಪೈಪೋಟಿ ನಡೆಸುತ್ತಿತ್ತು.

ಆದರೆ, ಈ ವಾಹನಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯೇನೂ ಇರಲಿಲ್ಲ. ಈ ಮಾದರಿಯ ಒಟ್ಟು 19,800 ಕಾರುಗಳು ಮಾರಾಟ ಆಗಿದ್ದವು. ‘ಹೊಸ ವರ್ಷದಲ್ಲಿ (2022ರಲ್ಲಿ) ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆಗಳು ನಡೆದಿವೆ’ ಎಂದು ಕೂಡ ಕಂಪನಿ ಹೇಳಿದೆ. ಯಾರಿಸ್‌ ಕಾರಿನ ಬಿಡಿ ಭಾಗಗಳು ಇನ್ನು ಕನಿಷ್ಠ 10 ವರ್ಷಗಳವರೆಗೆ ಸಿಗಲಿವೆ ಎಂದು ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT