ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಕುಟುಂಬಕ್ಕೆ ಟಿಟಿಕೆ ಪ್ರೆಸ್ಟೀಜ್ ನೆರವು

Last Updated 2 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕಕ್ಕೆ ತುತ್ತಾಗುವ ತನ್ನ ನೌಕರರ ಕುಟುಂಬದವರ ನೆರವಿಗೆ ಟಿಟಿಕೆ ಪ್ರೆಸ್ಟೀಜ್ ಕಂಪನಿ ಮುಂದಾಗಿದೆ. ನೌಕರ ಕೋವಿಡ್‌ನಿಂದಾಗಿ ಮೃತಪಟ್ಟರೆ, ಅವರ ಕುಟುಂಬಕ್ಕೆ ಒಂದು ವರ್ಷದ ಅವಧಿಗೆ ಕಂಪನಿಯ ಕಡೆಯಿಂದ ನೌಕರನ ಪೂರ್ತಿ ವೇತನ ಕೊಡಲಾಗುತ್ತದೆ.

ಎರಡನೆಯ ವರ್ಷದಲ್ಲಿ, ನೌಕರನ ಸಂಬಳದ ಶೇಕಡ 50ರಷ್ಟನ್ನು ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ನೌಕರ ಮೃತಪಟ್ಟ ದಿನದಿಂದ ಎರಡು ವರ್ಷಗಳವರೆಗೆ, ಆತ ನಾಮನಿರ್ದೇಶನ ಮಾಡಿದ್ದ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವಿಮೆಯ ಸೌಲಭ್ಯ ಮುಂದುವರಿಯಲಿದೆ.

ಕುಟುಂಬದ ಸದಸ್ಯರು ನೌಕರಿ ಮಾಡಲು ಸಿದ್ಧರಿದ್ದರೆ, ಅವರಿಗೆ ಅಗತ್ಯ ಕೌಶಲ ಇದ್ದರೆ, ಉದ್ಯಮಕ್ಕೆ ಅವರ ಅಗತ್ಯ ಇದ್ದರೆ, ಮೃತ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಕಲ್ಪಿಸುವ ಗುರಿ ಕಂಪನಿಗೆ ಇದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT