ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿಎಸ್ ಕಾರ್ಯಾಚರಣೆ ವರಮಾನ ಏರಿಕೆ

Last Updated 5 ಮೇ 2022, 16:30 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್ಸ್‌ನ ಮಾರ್ಚ್‌ ತ್ರೈಮಾಸಿಕದ ಕಾರ್ಯಾಚರಣೆ ವರಮಾನವು ಶೇಕಡ 4ರಷ್ಟು ಹೆಚ್ಚಾಗಿ, ₹ 5,530 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇದು ₹ 5,322 ಕೋಟಿ ಆಗಿತ್ತು.

2022ರ ಮಾರ್ಚ್‌ ತ್ರೈಮಾಸಿಕದ ತೆರಿಗೆ ಪೂರ್ವದ ಲಾಭವು ₹ 387 ಕೋಟಿ ಆಗಿದೆ. ತೆರಿಗೆ ನಂತರದ ಲಾಭವು ₹ 275 ಕೋಟಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸುದರ್ಶನ್ ವೇಣು ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ‘ಸುದರ್ಶನ್ ಅವರ ನಾಯಕತ್ವದಲ್ಲಿ ಕಂಪನಿಯು ಜಾಗತಿಕವಾಗಿಯೂ ಮುಂಚೂಣಿ ಸ್ಥಾನವನ್ನು ಪಡೆಯಲಿದೆ ಎಂಬ ವಿಶ್ವಾಸ ಇದೆ’ ಎಂದು ಕಂಪನಿಯ ಗೌರವಾಧ್ಯಕ್ಷ ವೇಣು ಶ್ರೀನಿವಾಸನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT