ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಾಂತ್ಯಕ್ಕೆ ಮತ್ತೆ ಬ್ಲೂ ಟಿಕ್‌ ಸಾಧ್ಯತೆ: ಇಲಾನ್‌ ಮಸ್ಕ್‌

Last Updated 13 ನವೆಂಬರ್ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ಟ್ವಿಟರ್ ಖಾತೆಯ ಹೆಸರಿನ ಮುಂದೆ ಬ್ಲೂ ಟಿಕ್‌ ವಾರಾಂತ್ಯದ ವೇಳೆಗೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಂಪನಿಯ ಮಾಲೀಕ ಇಲಾನ್ ಮಸ್ಕ್‌ ಶನಿವಾರ ಟ್ವೀಟ್‌ ಮಾಡಿದ್ದಾರೆ.

ಬ್ಲ್ಯೂ ಟಿಕ್‌ ಸೇವೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು ಎಂದು ಮಸ್ಕ್‌ ಈಚೆಗಷ್ಟೇ ಘೋಷಿಸಿದ್ದರು. ಆ ಬಳಿಕ ನಕಲಿ ಖಾತೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದರಿಂದ ಬ್ಲೂ ಟಿಕ್ ಚಂದಾದಾರಿಕೆ ಸೇವೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ. ಮಸ್ಕ್ ಅವರ ಟೆಸ್ಲಾ, ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಜನಪ್ರಿಯ ಕಂಪನಿಗಳ ಖಾತೆಗಳ ನಕಲಿ ಖಾತೆಗಳು ಸೃಷ್ಟಿಯಾಗಿದ್ದವು.

ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮಸ್ಕ್‌ ಹರಸಾಹಸಪಡುತ್ತಿದ್ದಾರೆ. ಬ್ಲೂ ಟಿಕ್‌ಗೆ ಬಳಕೆದಾರರಿಂದ ಮಾಸಿಕ ಶುಲ್ಕ ಪಡೆಯುವ ಮೂಲಕ ಟ್ವಿಟರ್‌ಗೆ ಆದಾಯದ ಹೊಸ ಮೂಲವನ್ನು ಸೃಷ್ಟಿಸುವ ಉದ್ದೇಶವನ್ನು ಮಸ್ಕ್‌ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT