ಶನಿವಾರ, ಡಿಸೆಂಬರ್ 3, 2022
26 °C
twitter

ಟ್ವಿಟರ್‌ ನೌಕರರ ಸಾಮೂಹಿಕ ರಾಜೀನಾಮೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಮಸ್ಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನೌಕರರು ಸಾಮೂಹಿಕವಾಗಿ ಕಂಪನಿ ತೊರೆತಯುತ್ತಿರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟ್ವಿಟ‌ರ್‌ ಮಾಲೀಕ ಇಲಾನ್‌ ಮಸ್ಕ್‌ ಹೇಳಿದ್ದಾರೆ.

ಟ್ವಟಿರ್‌ ಉದ್ಯೋಗಿಗಳು ‘ನಿಗದಿತ ಅವಧಿಗೂ ಮೀರಿ ಕಠಿಣ ಶ್ರಮ ವಹಿಸಬೇಕು‘ ಎಂದು ಇಲಾನ್‌ ಮಸ್ಕ್‌ ಮೇಲ್‌ ಮಾಡಿದ ಬೆನ್ನಲ್ಲೇ, ನೂರಾರು ಉದ್ಯೋಗಿಗಳು ರಾಜೀನಾಮೆ ನೀಡಲು ಪ್ರಾರಂಭ ಮಾಡಿದ್ದರು. 

ಕಂಪನಿಯ ಆಂತರಿಕ ಸಂವಹನ ವೇದಿಕೆಯಲ್ಲಿ ನೂರಾರು ಮಂದಿ ತಾವು ಕೆಲಸಕ್ಕೆ ರಾಜೀನಾಮೆ ನೀಡಿ‌ರುವುದಾಗಿ ಘೋಷಣೆ ಮಾಡಿದ್ದರು.

ಇದರ ಬಗ್ಗೆ ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಮಸ್ಕ್‌ ಅವರನ್ನು ಟ್ಯಾಗ್‌ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಮಸ್ಕ್‌, ‘ಉತ್ತಮ ಜನ ಉಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ‘ ಎಂದು ಹೇಳಿದ್ದಾರೆ.

ಅಲ್ಲದೇ ಇನ್ನೊಂದು ಟ್ವೀಟ್‌ನಲ್ಲಿ, ‘ನಾವು ಸಾರ್ವಕಾಲಿಕ ಹೆಚ್ಚಿನ ಬಳಕೆದಾರರನ್ನು ಕಂಡಿದ್ದೇವೆ‘ ಎಂದು ಮಸ್ಕ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು