ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಒಪ್ಪಂದ ಮುಂದುವರಿಸಲು ಕಾನೂನು ಹೋರಾಟ: ಮಸ್ಕ್‌ಗೆ ಟ್ವಿಟರ್‌ ಎಚ್ಚರಿಕೆ

Last Updated 9 ಜುಲೈ 2022, 6:59 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು44 ಶತಕೋಟಿ ಡಾಲರ್‌ಗಳಿಗೆ ಖರೀದಿಸುವಒಪ್ಪಂದವನ್ನು ಮುಂದುವರಿಸುವಂತೆ ಮಾಡಲು ಇಲಾನ್‌ ಮಸ್ಕ್‌ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್‌ ಆಡಳಿತ ಮಂಡಳಿ ಅಧ್ಯಕ್ಷರು ಶುಕ್ರವಾರ ತಿಳಿಸಿದ್ದಾರೆ.

‘ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್‌ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ. ಹೀಗಾಗಿ ಒಪ್ಪಂದದಿಂದ ಹಿಂದೆಸರಿಯುತ್ತಿದ್ದೇವೆ’ ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಲಾನ್‌ಮಸ್ಕ್‌ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ವಿಟ್‌ ಮಾಡಿರುವ ಟ್ವಿಟರ್ಆಡಳಿತ ಮಂಡಳಿ ಅಧ್ಯಕ್ಷ ಬ್ರೆಟ್ ಟೇಲರ್,‘ಮಸ್ಕ್‌ ಅವರೊಂದಿಗೆ ಒಪ್ಪಿದ ಬೆಲೆ ಮತ್ತು ನಿಯಮಗಳಂತೆ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟ್ಟರ್ ಮಂಡಳಿಯು ಬದ್ಧವಾಗಿದೆ. ಒಪ್ಪಂದ ಮುಂದುವರಿಸುವಂತೆ ಮಾಡಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಲಾಗಿದೆ’ ಎಂದಿದ್ದಾರೆ.

‘ನಾವು ಗೆಲುವುಸಾಧಿಸುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು 44 ಶತಕೋಟಿ ಡಾಲರ್‌ಗೆ (₹3.49 ಲಕ್ಷ ಕೋಟಿ) ಖರೀದಿಸುವ ಒಪ್ಪಂದ ಇಲಾನ್‌ ಮಸ್ಕ್‌ ಮತ್ತು ಟ್ವಿಟರ್‌ ನಡುವೆಏಪ್ರಿಲ್‌ನಲ್ಲಿ ಏರ್ಪಟ್ಟಿತ್ತು.ಟ್ವಿಟರ್‌ನ ಪ್ರತಿ ಷೇರನ್ನು 54.20 ಡಾಲರ್‌ಗಳಿಗೆ (₹4,299) ಖರೀದಿಸುವುದಾಗಿ ಮಸ್ಕ್ ಮಾತುಕತೆ ವೇಳೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT