ಸೋಮವಾರ, ಡಿಸೆಂಬರ್ 5, 2022
19 °C

Twitter -ಟ್ವಿಟರ್‌ಗೆ ಶೀಘ್ರವೇ ಹೊಸ ಸಾರಥಿಯ ನೇಮಕ: ಇಲಾನ್ ಮಸ್ಕ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟ್ವಿಟರ್‌ಗೆ ಶೀಘ್ರವೇ ನೂತನ ಸಾರಥಿಯನ್ನು ನೇಮಕ ಮಾಡುವುದಾಗಿ ಮಾಲೀಕ ಇಲಾನ್ ಮಸ್ಕ್‌ ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಟ್ವಿಟರ್‌ನ ಸಾಂಸ್ಥಿಕ ಪುನರಚನೆ ಪ್ರಕ್ರಿಯೆಗಳನ್ನು ಮುಗಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಟೆಸ್ಲಾದಲ್ಲಿ ಮಸ್ಕ್‌ ವಾರ್ಷಿಕ $56 ಡಾಲರ್ ಪೇ ಪ್ಯಾಕೇಜ್‌ ಪಡೆಯುತ್ತಿದ್ದು, ಅವರಿಗೆ ನೀಡಿರುವ ವಾರ್ಷಿಕ ಗುರಿ ಸುಲಭದಲ್ಲಿ ಸಾಧಿಸುವಂತಿದೆ ಎಂದು ಟೆಸ್ಲಾದ ನಿರ್ದೇಶಕರು ಕೋರ್ಟ್‌ ಮೆಟ್ಟಲೇರಿದ್ದರು. ಅಲ್ಲ‌ದೇ ಟ್ವಿಟರ್‌ ಕಡೆ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ಕೋರ್ಟ್‌ಗೆ ಉತ್ತರಸುವ ವೇಳೆ, ಮಸ್ಕ್‌ ಅವರು ಟ್ವಿಟರ್‌ಗೆ ಹೊಸ ನಾಯಕನನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ.

ಟ್ವಿಟರ್‌ ಸ್ವಾಧೀನದ ಬಳಿಕ, ಮಸ್ಕ್‌ ಅವರು ಟ್ವಿಟರ್‌ ಬಗ್ಗೆಯೇ ಹೆಚ್ಚಿನ ಗಮ‌ನ ಹರಿಸುತ್ತಿದ್ದಾರೆ ಎಂದು ಟೆಸ್ಲಾದ ನಿರ್ದೇಶಕರು ಅಸಮಾಧಾನ ವ್ಯಕ್ತ ಪಡಿಸಿದ್ದರು.

‘ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಪುನರಚನೆ ಕೆಲಸಗಳು ಇದ್ದವು. ನಾನು ಟ್ವಿಟರ್‌ಗೆ ನೀಡುತ್ತಿರುವ ಸಮಯವನ್ನು ಕಡಿಮೆ ಮಾಡಲಿದ್ದೇನೆ‘ ಎಂದು ಮಸ್ಕ್‌ ಹೇಳಿದ್ದಾರೆ.

ಅಲ್ಲದೇ ಟೆಸ್ಲಾದ ಕೆಲವೊಂದು ಎಂಜಿನಿಯರ್‌ಗಳು ಟ್ವಿಟರ್‌ನ ಎಂಜಿನಿಯರಿಂಗ್‌ ತಂಡವನ್ನು ಪರಿಶೀ‌ಲನೆ ನಡೆಸುತ್ತಿದ್ದಾರೆ. ಅವರ ಕೆಲಸದ ಬಳಿಕ ಸ್ವಯಂ ಪ್ರೇರಿತವಾಗಿ ಈ ಕೆಲಸ ಮಾಡುತ್ತಿದ್ದಾರೆ‘ ಎಂದು ಮಸ್ಕ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು