ಮುಂಬೈ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭದಲ್ಲಿ ಶೇ 50ರಷ್ಟು ಏರಿಕೆಯಾಗಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ₹4,985 ಕೋಟಿ ಲಾಭ ಗಳಿಸಿದೆ. 2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹3,311 ಕೋಟಿ ಲಾಭ ಗಳಿಸಲಾಗಿತ್ತು ಎಂದು ಬ್ಯಾಂಕ್ ಶುಕ್ರವಾರ ತಿಳಿಸಿದೆ.

ಒಟ್ಟು ವರಮಾನ ₹33,254 ಕೋಟಿ ಆಗಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಶೇ 11ರಿಂದ ಶೇ 13ರಷ್ಟು ಸಾಲ ನೀಡಿಕೆಯ ಗುರಿ ಹೊಂದಲಾಗಿತ್ತು. ಒಟ್ಟಾರೆ ಶೇ 8.62ರಷ್ಟು ಗುರಿ ಸಾಧನೆಯಾಗಿದೆ ಎಂದು ತಿಳಿಸಿದೆ.

ಮಾಜಿ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಬರೆದಿರುವ ‘ಇಂಡಿಯಾ@100: ಎನ್ವಿಷನಿಂಗ್ ಟುಮಾರೋಸ್ ಎಕಾನಿಕ್ ಪವರ್ಹೌಸ್’ ಕೃತಿಯ 2 ಲಕ್ಷ ಪ್ರತಿಗಳನ್ನು ₹7.25 ಕೋಟಿ ವೆಚ್ಚದಡಿ ಖರೀದಿಗೆ ಬ್ಯಾಂಕ್ ಮುಂದಾಗಿರುವ ವಿಷಯವು ವಿವಾದಕ್ಕೆ ಕಾರಣವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಎ. ಮಣಿಮೇಖಲೈ ಈ ಕುರಿತು ಸ್ಪಷ್ಟನೆ ನೀಡಲು ನಿರಾಕರಿಸಿದರು. ಆಡಳಿತ ಮಂಡಳಿಯು ಪ್ರಕರಣ ಕುರಿತು ತನಿಖೆಗೆ ಮುಂದಾಗಿದೆಯೇ? ಎಂಬ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.