ಸೋಮವಾರ, ಮಾರ್ಚ್ 1, 2021
27 °C

ರಾತ್ರಿ 1 ರಿಂದ 3ರ ವರೆಗೆ ಯುಪಿಐ ಬಳಸಬೇಡಿ: ರಾಷ್ಟ್ರೀಯ ಪಾವತಿ ನಿಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುನಿಫೈಡ್‌ ಪೇಮೆಂಟ್‌ ಇಂಟರ್ಫೇಸ್ ಅಥವಾ ಸಾಮಾನ್ಯವಾಗಿ ಯುಪಿಐ ಎಂದು ಕರೆಯಲಾಗುವ ಪಾವತಿ ವ್ಯವಸ್ಥೆಯು ಮುಂದಿನ ಎರಡು ದಿನಗಳವರೆಗೆ ರಾತ್ರಿ 1 ರಿಂದ 3 ರವರೆಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಹೇಳಿದೆ.

'ಯುಪಿಐ ವಹಿವಾಟಿನ ಬೆಳವಣಿಗೆಗೆ ಪೂರಕವಾದ ರಚನೆ ರೂಪಿಸಲು ಯುಪಿಐ ಮುಂದಿನ ಕೆಲವು ದಿನಗಳವರೆಗೆ ರಾತ್ರಿ 1ರಿಂದ 3ರ ವರೆಗೆ ನವೀಕರಣ ಪ್ರಕ್ರಿಯೆ ನಡೆಯಲಿದೆ' ಎಂದು ಎನ್‌ಪಿಸಿಐ ತಿಳಿಸಿದೆ.

ಈ ಅವಧಿಯಲ್ಲಿ ಮಾಡಬೇಕಾದ ಯಾವುದೇ ಪಾವತಿಯನ್ನು ಮುಂದೂಡುವಂತೆಯೂ ಅದು ಮನವಿ ಮಾಡಿದೆ.

ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಪ್ರಮುಖ ಡಿಜಿಟಲ್‌ ಪಾವತಿ ವ್ಯವಸ್ಥೆಗಳು ಯುಪಿಐ ಮೂಲಕವೇ ಕಾರ್ಯನಿರ್ವಹಣೆ ಮಾಡುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು