ಸೋಮವಾರ, ಜನವರಿ 17, 2022
22 °C

ಆನ್‌ಲೈನ್ ಪೇಮೆಂಟ್‌ನ UPI ಸೇವೆ ವ್ಯತ್ಯಯ: ಬಳಕೆದಾರರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಭಾನುವಾರ ಕೆಲವು ಹೊತ್ತು ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ, ಯುಪಿಐ ಆಧಾರಿತ ಪಾವತಿ ಸೇವೆಗಳನ್ನು ಬಳಸುವವರಿಗೆ ಅಡಚಣೆ ಉಂಟಾಯಿತು.

‘ಯುಪಿಐ ಬಳಕೆದಾರರಿಗೆ ಎದುರಾದ ಅಡಚಣೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಪದೇ ಪದೇ ಎದುರಾಗುತ್ತಿದ್ದ ತಾಂತ್ರಿಕ ತೊಂದರೆ ಈ ಅಡಚಣೆಗೆ ಕಾರಣ’ ಎಂದು ಎನ್‌ಪಿಸಿಐ ಭಾನುವಾರ ಸಂಜೆ ಟ್ವೀಟ್ ಮಾಡಿದೆ. ಸಂಜೆಯ ವೇಳೆಗೆ ಯುಪಿಐ ಸೇವೆಗಳು ಸಹಜ ಸ್ಥಿತಿಗೆ ಬಂದಿದ್ದವು.

 

ಯುಪಿಐ ಆಧಾರಿತ ಪಾವತಿ ಸೇವೆಗಳಲ್ಲಿ ತೊಂದರೆ ಆಗಿದ್ದರ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ. ‘ಯುಪಿಐ ವ್ಯವಸ್ಥೆ ಬಹಳ ಒಳ್ಳೆಯದು. ಆದರೆ, ಅದರ ಮೇಲಿನ ಅತಿಯಾದ ಅವಲಂಬನೆ ಬೇಡ. ನಾನು ಎಲ್ಲ ಕಡೆಯೂ ನಗದುರಹಿತ ವಹಿವಾಟು ನಡೆಸುತ್ತೇನೆ. ಇವತ್ತು ದಿನಸಿ ಅಂಗಡಿಗೆ ಹೋಗಿದ್ದೆ. ನಗದು ಇರಲಿಲ್ಲ. ಅಲ್ಲಿ ಹಣ ಪಾವತಿ ಮಾಡಲು 30 ನಿಮಿಷ ಕಾಯಬೇಕಾಯಿತು. ನಂತರ ನನ್ನ ಪರಿಚಯದವರೊಬ್ಬರು ನನ್ನ ಪರವಾಗಿ ಹಣ ಪಾವತಿಸಿದರು’ ಎಂದು ಹೃಷಿಕೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು