ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿ ವಿಸ್ತರಿಸಿವೆ.

ಲಾಕ್‌ಡೌನ್ ಇರುವ ನಗರಗಳು ಮತ್ತು ರಾಜ್ಯಗಳಲ್ಲಿನ ಗ್ರಾಹಕರಿಗೆ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಣೆ ಮಾಡಿರುವುದಾಗಿ ಹುಂಡೈ ಮೋಟರ್ ಇಂಡಿಯಾ ಕಂಪನಿ ಶನಿವಾರ ತಿಳಿಸಿದೆ.

ರೆನೊ ಮತ್ತುಎಂಜಿ ಮೋಟರ್ ಇಂಡಿಯಾ ಕಂಪನಿಗಳು ಏಪ್ರಿಲ್ 1ರಿಂದ ಮೇ 31ರವರೆಗಿನ ಅವಧಿಯಲ್ಲಿ ಮುಗಿಯಲಿರುವ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿವೆ.

ಕೋವಿಡ್–19 ನಿಯಂತ್ರಿಸಲು ನಿರ್ಬಂಧ ವಿಧಿಸಿರುವ ರಾಜ್ಯಗಳಲ್ಲಿ ವಾಹನದ ವಾರಂಟಿ ಮತ್ತು ವಿಸ್ತರಿತ ವಾರಂಟಿ ಅವಧಿಯನ್ನು ಒಂದು ತಿಂಗಳವರೆಗೆ ಹೆಚ್ಚಿಸಿರುವುದಾಗಿ ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿ ಹೇಳಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಉಚಿತ ಸೇವೆಗಳು ಮತ್ತು ವಾರಂಟಿ ಅವಧಿಯನ್ನು ಜೂನ್ 30ರವರೆಗೂ ವಿಸ್ತರಿಸಿರುವುದಾಗಿ ತಿಳಿಸಿದೆ. 2021ರ ಮಾರ್ಚ್ 15ರಿಂದ ಮೇ 31ರ ಅವಧಿಯ ಒಳಗಡೆ ಉಚಿತ ಸೇವೆ ಮತ್ತು ವಾರಂಟಿ ಮುಗಿಯುವುದಿದ್ದರೆ, ಅಂತಹ ವಾಹನಗಳಿಗೆ ಮಾತ್ರವೇ ಇದು ಅನ್ವಯ ಆಗಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಟಾ ಮೋಟರ್ಸ್ ಸಹ ದೇಶದಾದ್ಯಂತ ಏಪ್ರಿಲ್ 1ರಿಂದ ಮೇ 31ರ ಒಳಗೆ ಮುಗಿಯಲಿರುವ ವಿಸ್ತರಿತ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.