ಮಂಗಳವಾರ, ಆಗಸ್ಟ್ 16, 2022
29 °C

42.8 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವಿಐಎಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಷ್ಟದಲ್ಲಿರುವ ವೊಡಾಫೋನ್‌ ಐಡಿಯಾ ಲಿಮಿಟೆಡ್ (ವಿಐಎಲ್‌) ಕಂಪನಿಯು ಜೂನ್‌ನಲ್ಲಿಯೂ ಮೊಬೈಲ್‌ ಬಳಕೆದಾರರನ್ನು  ಕಳೆದುಕೊಂಡಿದೆ. ಇದೇ ವೇಳೆ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಮಾಹಿತಿ ನೀಡಿದೆ.

ವೊಡಾಫೋನ್‌ ಐಡಿಯಾ ಕಂಪನಿಯು ಜೂನ್‌ನಲ್ಲಿ 42.8 ಲಕ್ಷ ಮೊಬೈಲ್‌ ಬಳಕೆದಾರರನ್ನು ಕಳೆದುಕೊಂಡಿದೆ. ಇದರಿಂದ ಕಂಪನಿಯ ಒಟ್ಟಾರೆ ಗ್ರಾಹಕರ ಸಂಖ್ಯೆಯು 27.3 ಕೋಟಿಗೆ ಇಳಿಕೆ ಆಗಿದೆ.

ರಿಲಯನ್ಸ್‌ ಜಿಯೊಗೆ ಜೂನ್‌ನಲ್ಲಿ ಹೊಸದಾಗಿ 54.6 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದು, ಒಟ್ಟು ಬಳಕೆದಾರರ ಸಂಖ್ಯೆ 43.6 ಕೋಟಿಗೆ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್‌ ಕಂಪನಿಯ ಬಳಕೆದಾರ ಸಂಖ್ಯೆಯು 38.1 ಲಕ್ಷದಷ್ಟು ಹೆಚ್ಚಾಗಿದ್ದು ಒಟ್ಟು ಬಳಕೆದಾರರ ಸಂಖ್ಯೆಯು 35.2 ಕೋಟಿಗಳಷ್ಟಾಗಿದೆ. ಮೊಬೈಲ್‌ ಬಳಕೆದಾರರ ಒಟ್ಟು ಸಂಖ್ಯೆಯು ಜೂನ್‌ ತಿಂಗಳ ಅಂತ್ಯಕ್ಕೆ 120.2 ಕೋಟಿಗಳಿಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು