ಶನಿವಾರ, ಜನವರಿ 25, 2020
22 °C
ಕಂಪನಿ ಅಧ್ಯಕ್ಷ ಕುಮಾರ್‌ ಮಂಗಳಂ ಬಿರ್ಲಾ ಹೇಳಿಕೆ

‘ಸರ್ಕಾರದ ನೆರವು ಸಿಗದಿದ್ದರೆ ವೊಡಾಫೋನ್‌ ಐಡಿಯಾ ಸ್ಥಗಿತ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೇಂದ್ರ ಸರ್ಕಾರವು ನೆರವಿಗೆ ಧಾವಿಸದಿದ್ದರೆ, ದೇಶದ ಮೂರನೇ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆಯಾಗಿರುವ ವೊಡಾಫೋನ್‌ ಐಡಿಯಾ ಬಾಗಿಲು ಹಾಕುವುದು ಅನಿವಾರ್ಯವಾಗಲಿದೆ’ ಎಂದು ಕಂಪನಿ ಅಧ್ಯಕ್ಷ ಕುಮಾರ್‌ ಮಂಗಳಂ ಬಿರ್ಲಾ ಹೇಳಿದ್ದಾರೆ.

‘ಸರ್ಕಾರದಿಂದ ನಮಗೆ ಹಣಕಾಸು ನೆರವು ಸಿಗದಿ‌ದ್ದರೆ ವೊಡಾಫೋನ್‌ ವಹಿವಾಟು ಸ್ಥಗಿತಗೊಳಿಸಲಾಗುವುದು’ ಎಂದು ಬಿರ್ಲಾ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಸರ್ಕಾರದ ನೆರವು ಸಿಗದಿದ್ದರೆವೊಡಾಫೋನ್‌ ಐಡಿಯಾ ಸ್ಥಗಿತ’

ಬಿರ್ಲಾ ಅವರ ಐಡಿಯಾ ಸೆಲ್ಯುಲರ್‌ ಮತ್ತು ಬ್ರಿಟನ್ನಿನ ದೂರಸಂಪರ್ಕ ದೈತ್ಯ ಸಂಸ್ಥೆ ವೊಡಾಫೋನ್‌ನ ಭಾರತದ ಅಂಗಸಂಸ್ಥೆ ಕಳೆದ ವರ್ಷಪರಸ್ಪರ ವಿಲೀನಗೊಂಡಿದ್ದವು. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊದ ಉಚಿತ ಕರೆ ಮತ್ತು ತೀರ ಅಗ್ಗದ ಡೇಟಾ ಸೇವೆಗೆ ಸ್ಪರ್ಧೆ ಒಡ್ಡಲು ಈ ವಿಲೀನ ಪ್ರಕ್ರಿಯೆ ನಡೆದಿತ್ತು.

ಕಂಪನಿಯು, ಸೆಪ್ಟೆಂಬರ್‌ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 50,921 ಕೋಟಿಗಳಷ್ಟು ನಷ್ಟ ದಾಖಲಿಸಿದೆ. ದೇಶಿ ಕಾರ್ಪೊರೇಟ್‌ ಸಂಸ್ಥೆಯೊಂದರ ಅತಿದೊಡ್ಡ ನಷ್ಟದ ಪ್ರಮಾಣ ಇದಾಗಿದೆ.

‘ದೊಡ್ಡ ಮೊತ್ತದ ನಷ್ಟಕ್ಕೆ ಗುರಿಯಾದ ನಂತರ ಹೊಸದಾಗಿ ಹಣ ತೊಡಗಿಸುವುದು ಲಾಭದಾಯಕವಾಗಿರುವುದಿಲ್ಲ. ಹೀಗಾಗಿ ನಾವು ವಹಿವಾಟು ಸ್ಥಗಿತಗೊಳಿಸುತ್ತೇವೆ’ ಎಂದು ಬಿರ್ಲಾ ಹೇಳಿದ್ದಾರೆ.

‘ಕೇವಲ ದೂರಸಂಪರ್ಕ ಕ್ಷೇತ್ರಕ್ಕಷ್ಟೆ ಅಲ್ಲದೆ, ಒಟ್ಟಾರೆ ಆರ್ಥಿಕತೆಯನ್ನು ಶೇ 4.5ರಷ್ಟಕ್ಕೆ ಕುಸಿದಿರುವ ಜಿಡಿಪಿಯಿಂದ ಮೇಲಕ್ಕೆತ್ತಲು ಸರ್ಕಾರ ಪರಿಹಾರ ಕೊಡುಗೆ ಘೋಷಿಸಲಿದೆ’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು