ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಉಚಿತವಾಗಿ ಪ್ರೀಮಿಯಂ ಮೊಬೈಲ್ ಸಂಖ್ಯೆ ತಲುಪಿಸಲಿದೆ ವೊಡಾಫೋನ್

Last Updated 23 ಡಿಸೆಂಬರ್ 2021, 9:25 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೀಮಿಯಂ ಮತ್ತು ನೆಚ್ಚಿನ ಫ್ಯಾನ್ಸಿ ಸಂಖ್ಯೆಯ ಮೊಬೈಲ್ ನಂಬರ್ ಬಯಸುವವರಿಗಾಗಿ ವೊಡಾಫೋನ್ ಐಡಿಯಾ ಹೊಸ ಯೋಜನೆ ಪ್ರಕಟಿಸಿದೆ.

ಮನೆ ಬಾಗಿಲಿಗೇ ಉಚಿತವಾಗಿ ‘ವಿ‘ ಪ್ರೀಮಿಯಂ ಮತ್ತು ಫ್ಯಾನ್ಸಿ ಮೊಬೈಲ್ ನಂಬರ್‌ಗಳನ್ನು ವಿತರಿಸಲು ವೊಡಾಫೋನ್ ಐಡಿಯಾ ಮುಂದಾಗಿದೆ.

ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತ, ಅಹಮದಾಬಾದ್, ಸೂರತ್ ಮತ್ತು ಜೈಪುರದಲ್ಲಿ ಈ ಯೋಜನೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ವಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರಲ್ಲಿನ ನ್ಯೂ ಕನೆಕ್ಷನ್ ಅಡಿಯಲ್ಲಿ ಚೂಸ್ ಯುವರ್ ಫ್ಯಾನ್ಸಿ ಮೊಬೈಲ್ ನಂಬರ್ಸ್ ಎಂದಿರುವಲ್ಲಿ ಕ್ಲಿಕ್ ಮಾಡಿ, ಅಲ್ಲಿ ಕೇಳಿರುವ ವಿವರ ಭರ್ತಿ ಮಾಡಿ, ಹೊಸ ಫ್ಯಾನ್ಸಿ ಸಿಮ್ ಉಚಿತವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT