ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಎಸ್‍ಟಿ ಝೆಟಾರ್‌ನ 3 ಹೊಸ ಟ್ರ್ಯಾಕ್ಟರ್ ಅನಾವರಣ

Published 10 ಮೇ 2024, 10:23 IST
Last Updated 10 ಮೇ 2024, 10:23 IST
ಅಕ್ಷರ ಗಾತ್ರ

ಬೆಂಗಳೂರು: ವಿಎಸ್‍ಟಿ ಝೆಟಾರ್ ಕಂಪನಿಯು 41ರಿಂದ 50 ಎಚ್‍.ಪಿ ಶ್ರೇಣಿಯಲ್ಲಿನ ಮೂರು ಹೊಸ ಟ್ರ್ಯಾಕ್ಟರ್‌ಗಳನ್ನು ನಗರದಲ್ಲಿ ಇತ್ತೀಚೆಗೆ ಅನಾವರಣ ಮಾಡಿತು.

ವಿಎಸ್‍ಟಿ ಝೆಟಾರ್ 4211, ವಿಎಸ್‍ಟಿ ಝೆಟಾರ್ 4511 ಮತ್ತು ವಿಎಸ್‍ಟಿ ಝೆಟಾರ್ 5011 ಹೊಸ ಮಾದರಿಗಳಾಗಿವೆ. ಅತ್ಯುತ್ತಮ ಡಿಐ ಎಂಜಿನ್, ಸಂಪೂರ್ಣ ಕಾನ್‍ಸ್ಪಂಟ್ ಮೆಷ್ ಟ್ರ್ಯಾನ್ಸ್‌ಮಿಷನ್ ಜೊತೆಗೆ ಎಲಿಕಲ್ ಗೇರ್‌ಗಳು, ವಿಝೆಡ್‌ಮ್ಯಾಟ್ರಿಕ್ ಹೈಡ್ರಾಲಿಕ್ಸ್‌ಗಳನ್ನು ಹೊಂದಿದೆ.

ಡ್ಯುಯಲ್ ಡಂಯಾಫ್ರಮ್ ಕ್ಲಚ್, ಆಪ್ಟಿಮಂ, ಟನಿಂಗ್ ರೇಡಿಯಸ್, ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಬಹುದಾದ ಆಸನ, ಡ್ಯುಯಲ್ ಆಕ್ಟಿಂಗ್ ಪವರ್ ಸ್ಟೀರಿಂಗ್, ಏರೋಡೈನಾಮಿಕ್ ಸ್ಟೈಲಿಂಗ್‍ಗಳ ಕಾರ್ಯಾಚರಣೆ ಸುಲಭವಾಗಿದೆ. ಮೊಬೈಲ್ ಚಾರ್ಜಿಂಗ್ ಇಟ್ಟುಕೊಳ್ಳಲು ಅವಕಾಶ ಇದೆ.

ಬೆಲೆ: ₹8 ಲಕ್ಷದಿಂದ 9 ಲಕ್ಷದವರೆಗೆ ಈ ಟ್ರ್ಯಾಕ್ಟರ್‌ಗಳ ಬೆಲೆ ಇರಲಿದೆ. ಇವುಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‍ಬಿಎಫ್‍ಸಿ) ಟ್ರ್ಯಾಕ್ಟರ್ ಖರೀದಿಗೆ ಸಾಲ ಸೌಲಭ್ಯ ನೀಡಲಿದೆ.

‘ಶೀಘ್ರದಲ್ಲೇ ಮಳೆಗಾಲ ಆರಂಭವಾಗಲಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಇದಕ್ಕೆ ಈ ಹೊಸ ಟ್ರ್ಯಾಕ್ಟರ್‌ಗಳು ಅನುಕೂಲವಾಗಲಿವೆ. ಹೆಚ್ಚು ಸಾಮರ್ಥ್ಯವುಳ್ಳ ಈ ಟ್ರ್ಯಾಕ್ಟರ್‌ಗಳು ಚಾಲಕ ಸ್ನೇಹಿಯಾಗಿ, ಕೃಷಿಗೆ ಅನುಕೂಲ ಕಲ್ಪಿಸಲಿದೆ’ ಎಂದು ಕಂಪನಿಯ ಉಪಾಧ್ಯಕ್ಷ ಫಿಲಿಪ್‌ ಸೋಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಂಟೋನಿ ಚೆರುಕೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT