ಬೆಂಗಳೂರು: ದೇಶದ ಪ್ರಮುಖ ಪಾದರಕ್ಷೆ ಬ್ರ್ಯಾಂಡ್ ಆಗಿರುವ ವಾಕರೂ ಕಂಪನಿಯಿಂದ ನಗರದ ನಾಗವಾರದಲ್ಲಿ ಶನಿವಾರ ನಡೆದ ಟ್ರೇಡ್ ಶೋನಲ್ಲಿ 1,000ಕ್ಕೂ ಹೆಚ್ಚು ಹೊಸ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ವಾಕರೂ ಪ್ಲಸ್, ವಾಕರೂ ಪ್ಲಸ್ ಪ್ಲಸ್ ಹಾಗೂ ವಾಕರೂ ಫ್ಲಿಪ್- ಫ್ಲಾಪ್ಸ್ ಪಾದರಕ್ಷೆಗಳು, ವಾಕರೂ ಸ್ಪೋರ್ಟ್ಸ್ ಶೂಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

‘ಗ್ರಾಹಕರ ಅಗತ್ಯತೆ ಪೂರೈಸಲು ಮತ್ತು ಅವರ ಅಭಿರುಚಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಒದಗಿಸುವುದು ಕಂಪನಿಯ ಗುರಿಯಾಗಿದೆ. ಕರ್ನಾಟಕದ ಆದ್ಯತೆಯ ಬ್ರ್ಯಾಂಡ್ ಆಗುವ ಗುರಿ ಹೊಂದಿದ್ದೇವೆ. ‘ನಿಮ್ಮ ಪಾದ ಅರಿಯಿರಿ’ ಯೋಜನೆ ಮೂಲಕ ಗ್ರಾಹಕರಿಗೆ ಅಗತ್ಯವಿರುವ ಪಾದರಕ್ಷೆಗಳನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ’ ಎಂದು ವಾಕರೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೌಶಾದ್ ತಿಳಿಸಿದ್ದಾರೆ.

‘ವಾಕರೂ ರಾಜ್ಯದಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. 12 ಸಾವಿರಕ್ಕೂ ಹೆಚ್ಚು ರಿಟೇಲ್ ವ್ಯಾಪಾರಿಗಳ ಮೂಲಕ ಗ್ರಾಹಕರಿಗೆ ಪಾದರಕ್ಷೆಗಳನ್ನು ಒದಗಿಸುತ್ತಿದೆ. ಉದ್ಯಮದಲ್ಲಿ ಸದಾ ಮುಂಚೂಣಿಯಲ್ಲಿರುವ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟ ಹಾಗೂ ಆರಾಮದಾಯಕ ಪಾದರಕ್ಷೆಗಳನ್ನು ಒದಗಿಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.