ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಧಿ ದಾಸ್ತಾನು ಯತ್ನಕ್ಕೆ ಲಗಾಮು’

Last Updated 14 ಮೇ 2022, 11:03 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೆಲವು ವಿದೇಶಿ ವರ್ತಕರು ಭಾರತದ ಗೋಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಅದರ ಬೆಲೆ ಜಾಸ್ತಿ ಆಗುವಂತೆ ಮಾಡುವುದನ್ನು ನಿಯಂತ್ರಿಸಲು ಗೋಧಿ ರಫ್ತು ನಿಷೇಧವು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಗೋಧಿ ದಾಸ್ತಾನು ಅಗತ್ಯವಿರುವ ದೇಶಗಳಿಗೆ, ಜಾಗತಿಕ ಬೇಡಿಕೆಗೆ ಸೂಕ್ತ ರೀತಿಯಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಕೇಂದ್ರಕ್ಕೆ ಇದೆ ಎನ್ನಲಾಗಿದೆ.

ಚೀನಾದ ವರ್ತಕರು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈಗಿನ ತೀರ್ಮಾನದ ಪರಿಣಾಮವಾಗಿ ಭಾರತದ ಗೋಧಿಯು ಅಗತ್ಯ ಇರುವ ದೇಶಗಳಿಗೆ ಮಾತ್ರ ತಲುಪುತ್ತದೆ ಎಂಬುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT