ಬುಧವಾರ, ಫೆಬ್ರವರಿ 19, 2020
17 °C

ವಿಪ್ರೊ ತೆಕ್ಕೆಗೆ ಸ್ಪ್ಲ್ಯಾಷ್ ಕಾರ್ಪೊರೇಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫಿಲಿಪ್ಪೀನ್ಸ್‌ನ ಪರ್ಸನಲ್‌ ಕೇರ್‌ ಕಂಪನಿ ಸ್ಪ್ಲ್ಯಾಷ್‌ ಕಾರ್ಪೊರೇಷನ್‌ ಅನ್ನು ವಶಕ್ಕೆ ಪಡೆದಿರುವುದಾಗಿ ವಿಪ್ರೊ ಕನ್ಸೂಮರ್‌ ಕೇರ್‌ ಕಂಪನಿ ಸೋಮವಾರ ತಿಳಿಸಿದೆ.

‘ಪರ್ಸನಲ್‌ ಕೇರ್‌ ವಿಭಾಗದಲ್ಲಿ ಏಷ್ಯಾದಲ್ಲಿ ಪ್ರಮುಖ ಮೂರು ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈ ಸ್ವಾಧೀನ ಮಹತ್ವದ್ದಾಗಿದೆ’ ಎಂದು ವಿಪ್ರೊ ಕನ್ಸೂಮರ್‌ ಕೇರ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿನೀತ್‌ ಅಗರ್‌ವಾಲ್‌ ಸುದ್ದಿಗೋಷ್ಠಿ
ಯಲ್ಲಿ ತಿಳಿಸಿದರು. 

‘ಸ್ಥಳೀಯವಾಗಿ ಉತ್ತಮ ವಹಿವಾಟು ಹೊಂದಿರುವ ಸ್ಪ್ಲ್ಯಾಷ್‌ ಕಂಪನಿಯು ಫಿಲಿಪ್ಪೀನ್ಸ್‌ನ ಮಾರುಕಟ್ಟೆಯಲ್ಲಿ ಮುಂಚೂಣಿಗೆ ಬರಲು ನೆರವಾಗಲಿದೆ. ನಮ್ಮ ತಯಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಹೆಚ್ಚಿನ ಅವಕಾಶ ಇದೆ’ ಎಂದರು.

‘ಇದು ನಮ್ಮ 11ನೇ ಸ್ವಾಧೀನ ಪ್ರಕ್ರಿಯೆಯಾಗಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹೂಡಿಕೆಯನ್ನು ಮುಂದುವರಿಸುವ ಬದ್ಧತೆಯನ್ನು ಕಾಯ್ದುಕೊಂಡಿದ್ದೇವೆ’ ಎಂದು ಸಿಎಫ್‌ಒ ರಾಘವ್‌ ಸ್ವಾಮಿನಾಥನ್‌ ಹೇಳಿದರು.

ಬ್ರ್ಯಾಂಡ್‌ ಮೌಲ್ಯ ವೃದ್ಧಿ: ‘ವಿಪ್ರೊ ಕುಟುಂಬದ ಭಾಗವಾಗಿರುವುದು ಸಂತೋಷದ ಸಂಗತಿ. ಈ ಒಪ್ಪಂದದಿಂದ ನಮ್ಮ ಬ್ರ್ಯಾಂಡ್‌ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಅಗತ್ಯವಾದ ಸಂಪನ್ಮೂಲ ಮತ್ತು ಮಾರುಕಟ್ಟೆಯನ್ನು ತಕ್ಷಣಕ್ಕೆ ಲಭ್ಯವಾಗುವಂತೆ ಮಾಡಿದೆ. ವಿಪ್ರೊ ಕಂಪನಿಯ ಮಾರುಕಟ್ಟೆ ನೈಪುಣ್ಯ ಮತ್ತು ಅಂತರರಾಷ್ಟ್ರೀಯ ವಿತರಣಾ ಜಾಲದಿಂದ ನಮ್ಮ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಗಲಿದೆ’ ಎಂದು ಸ್ಪ್ಲ್ಯಾಷ್‌ ಕಾರ್ಪೊರೇಷನ್‌ನ ಸ್ಥಾಪಕ ರೋಲ್ಯಾಂಡೊ ಬಿ. ಹರ್ಟಲೇಜ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು