ಶನಿವಾರ, ಮೇ 15, 2021
25 °C

ಕೋವಿಡ್ ಎರಡನೇ ಅಲೆ: ಕಚೇರಿ ಮತ್ತೆ ಆರಂಭ ಇನ್ನಷ್ಟು ತಡ ಸಾಧ್ಯತೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Representative image. Credit: iStock photo

ನವದೆಹಲಿ: ದೇಶದಲ್ಲಿ ಮತ್ತೆ ಹೆಚ್ಚಾಗಿರುವ ಕೋವಿಡ್ ಅಲೆಯಿಂದಾಗಿ ಕಾರ್ಪೊರೇಟ್ ಕಂಪನಿಗಳು ಕಚೇರಿ ಆರಂಭಿಸುವ ಯೋಜನೆಯನ್ನು ಮುಂದೂಡಲಿವೆ ಎಂದು ತಜ್ಞರು ಹೇಳಿದ್ದಾರೆ.

ಏಪ್ರಿಲ್ ತಿಂಗಳಿನಿಂದ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಸ್ಥಗಿತಗೊಳಿಸಿ, ಕಚೇರಿ ಆರಂಭಿಸುವ ಸಿದ್ಧತೆಯಲ್ಲಿದ್ದವು. ಅಲ್ಲದೆ, ಉದ್ಯೋಗಿಗಳಿಗೆ ಸೂಚನೆಯನ್ನು ಕೂಡ ನೀಡಲಾಗಿತ್ತು. ಆದರೆ ಕೋವಿಡ್ ಎರಡನೇ ಅಲೆ ಈ ಯೋಚನೆಯನ್ನು ತಲೆಕೆಳಗಾಗಿಸಿದೆ.

ಕೋವಿಡ್ ಸೋಂಕಿನಿಂದಾಗಿ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕಂಪನಿಗಳು ತೆಗೆದುಕೊಳ್ಳಬೇಕಿದ್ದು, ಈಗ ನೀಡಿರುವ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಮುಂದುವರಿಸಬೇಕಿದೆ ಎಂದು ಉದ್ಯಮ ಮತ್ತು ಕಾರ್ಪೊರೇಟ್ ವಲಯದ ತಜ್ಞರು ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದು ಸಾಧ್ಯವಿಲ್ಲ, ಅಲ್ಲದೆ, ಇನ್ನೂ ಮುಂದಿನ 2-3 ತಿಂಗಳವರೆಗೆ ಮನೆಯಿಂದಲೇ ಉದ್ಯೋಗಿಗಳು ಕೆಲಸ ನಿರ್ವಹಿಸುವುದು ಸೂಕ್ತ, ಅದು ಸುರಕ್ಷತೆಯೂ ಹೌದು ಎಂಬ ಅಭಿಪ್ರಾಯವನ್ನು ಉದ್ಯಮದ ಮುಖ್ಯಸ್ಥರು ಕೂಡ ಹೊಂದಿದ್ದಾರೆ.

ಲಸಿಕೆ ಕಾರ್ಯಕ್ರಮವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಿದರೆ, ಉದ್ಯೊಗಿಗಳು ಮತ್ತೆ ಕಚೇರಿಗೆ ಮರಳಿ ಕೆಲಸ ಮಾಡಬಹುದು. ಆದರೆ ಒಮ್ಮೆಲೆ ಹಿಂದಿನಂತೆ ಈ ಸಮಯದಲ್ಲಿ ಕಚೇರಿಗೆ ಮರಳುವುದು ಮತ್ತು ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ ಎಂಬ ಮಾತನ್ನು ಕಾರ್ಪೊರೇಟ್ ಕ್ಷೇತ್ರಗಳ ಕಂಪನಿಗಳಲ್ಲಿನ ಮಾನವ ಸಂಪನ್ಮೂಲ  ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು