ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌–19’ ತಡೆಗಟ್ಟಲು ₹ 84 ಸಾವಿರ ಕೋಟಿ ನೆರವು ನೀಡಿದ ವಿಶ್ವಬ್ಯಾಂಕ್

Last Updated 5 ಮಾರ್ಚ್ 2020, 2:04 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೋವಿಡ್‌–19’ ವೈರಸ್‌ ಪಿಡುಗು ತಡೆಗಟ್ಟಲು ವಿಶ್ವಬ್ಯಾಂಕ್‌ ₹ 84 ಸಾವಿರ ಕೋಟಿ ಮೊತ್ತದ ನೆರವಿನ ಕೊಡುಗೆ ಘೋಷಿಸಿದೆ.

‘ಕೋವಿಡ್‌–19’ ಹಾವಳಿ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಸದಸ್ಯ ದೇಶಗಳಿಗೆ ತುರ್ತಾಗಿ ಒದಗಿಸಲು ಈ ಕೊಡುಗೆ ನೆರವಾಗಲಿದೆ. ಜನರ ಜೀವ ಉಳಿಸಲು ಎಲ್ಲರೂ ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಾಗಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಲ್ಪಾಸ್‌ ಹೇಳಿದ್ದಾರೆ.

ಬಡ ದೇಶಗಳಲ್ಲಿ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸಲಕರಣೆಗಳನ್ನು ಒದಗಿಸಲು ಈ ಹಣಕಾಸು ನೆರವು ಬಳಕೆಯಾಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT