ನವದೆಹಲಿ: ಜೊಮಾಟೊ ಕಂಪನಿಯು ತನ್ನ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕದ (ಪ್ಲಾಟ್‌ಫಾರ್ಮ್ ಫೀ) ಮೂಲಕ ಪ್ರಸಕ್ತ ವರ್ಷದ ಮಾರ್ಚ್ ಅಂತ್ಯದವರೆಗೆ ₹83 ಕೋಟಿ ಸಂಗ್ರಹಿಸಿದೆ.

ಕಳೆದ ವರ್ಷದ ಆಗಸ್ಟ್‌ನಿಂದ ಈ ಶುಲ್ಕ ವಿಧಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ವಾರ್ಷಿಕ ಲಾಭ ಹಾಗೂ ವರಮಾನ ಹೆಚ್ಚಳಕ್ಕಾಗಿ ಈ ಶುಲ್ಕ ವಿಧಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.

ರೆಸ್ಟೋರೆಂಟ್‌ಗಳಿಗೆ ಕಮಿಷನ್ ನೀಡಿಕೆಯಲ್ಲಿ ಏರಿಕೆ ಮಾಡಲಾಗಿದೆ. ಕಂಪನಿಯ ಜಾಹೀರಾತು ಸುಧಾರಣೆಗೆ ಒತ್ತು ನೀಡಲಾಗಿದೆ. ಈ ವೆಚ್ಚ ಸರಿದೂಗಿಸಲು ಶುಲ್ಕದ ಮೂಲಕ ಸಂಗ್ರಹಿಸಿದ ಹಣವನ್ನು ಬಳಸಲಾಗುತ್ತಿದೆ ಎಂದು ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ದೆಹಲಿ ನಾಗರಿಕರು ತಡರಾತ್ರಿ ಆರ್ಡರ್‌ಗಳನ್ನು ಹೆಚ್ಚು ಮಾಡಿದ್ದಾರೆ. ಬೆಂಗಳೂರಿನಲ್ಲಿ ಬ್ರೇಕ್‌ಫಾಸ್ಟ್ ಆರ್ಡರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ ಎಂದು ತಿಳಿಸಿದೆ.

ಆಗಸ್ಟ್‌ನಲ್ಲಿ ಪ್ರತಿ ಆರ್ಡರ್‌ಗೆ ₹2 ಶುಲ್ಕ ವಿಧಿಸುವುದನ್ನು ಕಂಪನಿಯು ಆರಂಭಿಸಿತ್ತು. ಕೆಲವು ಪ್ರಮುಖ ನಗರಗಳಲ್ಲಿ ₹6ರ ವರೆಗೂ ಶುಲ್ಕ ಹೆಚ್ಚಿಸಲಾಗಿದೆ. ಜೊಮಾಟೊ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ ಈ ಶುಲ್ಕ ವಿಧಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.