ಜೊಮ್ಯಾಟೊ ಮಹಿಳಾ ಸಿಬ್ಬಂದಿಗಳಿಗೆ ಮುಟ್ಟಿನ ರಜೆ ಸೌಲಭ್ಯ

ನವದೆಹಲಿ: ಆಹಾರ ಪೂರೈಕೆಯ ಆ್ಯಪ್ ಆಧಾರಿತ ಸೇವೆ ನೀಡುವ ಜೊಮ್ಯಾಟೊ ಕಂಪನಿ ಮಹಿಳಾ ಸಿಬ್ಬಂದಿಗಳಿಗೆ ವರ್ಷದಲ್ಲಿ 10 ದಿನ ಮುಟ್ಟಿನ ರಜೆ ನೀಡುವುದಾಗಿ ಹೇಳಿದೆ.
ಜೊಮ್ಯಾಟೊ ಕಂಪನಿಯಲ್ಲಿ ನಾವು ನಂಬಿಕೆ, ಸತ್ಯ ಮತ್ತು ಸ್ವೀಕಾರದ ಸಂಸ್ಕೃತಿಯನ್ನು ಬೆಳೆಸಲು ಬಯಸುತ್ತೇವೆ. ಇಂದಿನಿಂದ ಲೈಂಗಿಕ ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲ ಮಹಿಳೆಯರಿಗೂ ವರ್ಷದಲ್ಲಿ 10 ದಿನ ಮುಟ್ಟಿನ ರಜೆ ಸೌಲಭ್ಯ ಪಡೆಯಬಹುದು ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಶನಿವಾರ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಮುಟ್ಟಿನ ರಜೆ ಪಡೆಯಲು ಯಾರೊಬ್ಬರೂ ನಾಚಿಕೆ ಪಡಬೇಕಿಲ್ಲ. ನಿಮ್ಮ ತಂಡದವರಿಗೆ ಅಥವಾ ಇಮೇಲ್ ಮೂಲಕವೂ ಮುಟ್ಟಿನ ರಜೆ ಪಡೆದಿರುವ ಬಗ್ಗೆ ಹೇಳಬಹುದು.
ಅದೇ ವೇಳೆ ಮಹಿಳಾ ಸಿಬ್ಬಂದಿಗಳು ಮುಟ್ಟಿನ ರಜೆ ಪಡೆಯುವುದರ ಬಗ್ಗೆ ಇತರ ಸಿಬ್ಬಂದಿಗಳು ಇರಿಸುಮುರಿಸು ಮಾಡಬಾರದು. ಮುಟ್ಟಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ತುಂಬಾ ನೋವು ಇರುತ್ತದೆ. ಜೊಮ್ಯಾಟೊದಲ್ಲಿ ನಾವು ನಿಜವಾದ ಸಹಕಾರ ಸಂಸ್ಕೃತಿಯನ್ನು ಬಯಸುವುದಾದರೆ ಈ ಹೊತ್ತಲ್ಲಿ ಅವರ ಪರವಾಗಿ ನಾವು ನಿಲ್ಲಬೇಕಿದೆ ಎಂದು ಗೋಯಲ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.