ನಿಮ್ಮ ತಂದೆಯೋ, ತಾಯಿಯೋ, ತಾತನೋ, ಅಜ್ಜಿಯೋ ಕುಟುಂಬದವರಿಗೆ ತಿಳಿಸದೆ ಬ್ಯಾಂಕ್ ಖಾತೆ ಆರಂಭಿಸಿರುತ್ತಾರೆ. ಅದಕ್ಕೆ ನಾಮನಿರ್ದೇಶನ ಮಾಡಿರುವುದಿಲ್ಲ. ಕೊನೆಗೆ, ಅವರ ಕಾಲದ ನಂತರ ಆ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಕುಟುಂಬದವರಿಗೆ ಮಾಹಿತಿ ಇರುವುದಿಲ್ಲ. ಆ ಖಾತೆಯಲ್ಲಿನ ಹಣವನ್ನು ಯಾರಿಗೆ ನೀಡಬೇಕು ಎಂದು ಬ್ಯಾಂಕ್ನವರಿಗೂ ಸ್ಪಷ್ಟತೆ ಇರುವುದಿಲ್ಲ. ಹೌದು, 2025ರ ಜೂನ್ವರೆಗೆ ಲಭ್ಯವಿರುವ ಅಂಕಿ–ಅಂಶದ ಪ್ರಕಾರ ಹೀಗೆ, ವಾರಸುದಾರರಿಲ್ಲದ ಸುಮಾರು ₹67 ಸಾವಿರ ಕೋಟಿಯಷ್ಟು ಮೊತ್ತವು ಬ್ಯಾಂಕ್ಗಳಲ್ಲಿ ಇದೆ. ಈ ಪೈಕಿ ₹58,330.26 ಕೋಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಇದ್ದರೆ, ಇನ್ನುಳಿದ ಸುಮಾರು ₹8,773.72 ಕೋಟಿ ಖಾಸಗಿ ಬ್ಯಾಂಕ್ಗಳಲ್ಲಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸುವುದೂ ಸೇರಿದಂತೆ, ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕ ಸ್ನೇಹಿ ನಿಯಮಗಳನ್ನು ಜಾರಿಗೆ ತರಲು ಹಣಕಾಸು ಸಚಿವಾಲಯ ತೀರ್ಮಾನಿಸಿದೆ.

ನವೆಂಬರ್ 1ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ಈ ಬದಲಾವಣೆಗಳು ಜಾರಿಗೆ ಬರುತ್ತಿವೆ. ಗ್ರಾಹಕರ ಬ್ಯಾಂಕ್ ಖಾತೆಗಳು, ಲಾಕರ್ಗಳು ಹಾಗೂ ಠೇವಣಿ ಸೇವೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಹಣದ ಹಕ್ಕು ಹಸ್ತಾಂತರ ಪ್ರಕ್ರಿಯೆಯನ್ನು ಸರಳಗೊಳಿಸುವುದು, ವಾದ-ವಿವಾದಗಳನ್ನು ತಗ್ಗಿಸುವುದು ಮತ್ತು ದಾವೆ ಪರಿಹಾರವನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ಮಾಡುವುದು ಇದರ ಉದ್ದೇಶ. ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ–2025ರ ಅಡಿಯಲ್ಲಿ ಹಾಗೂ ಹಣಕಾಸು ಸಚಿವಾಲಯವು ಅಧಿಸೂಚನೆಯನ್ನು ಪ್ರಕಟಿಸುವುದರೊಂದಿಗೆ, ಈ ಬದಲಾವಣೆಗಳು ಅನುಷ್ಠಾನಗೊಳ್ಳಲಿವೆ. ಗ್ರಾಹಕರಿಗೆ ಈ ಬ್ಯಾಂಕಿಂಗ್ ಕಾಯ್ದೆಯಿಂದ ಸಿಗುವ ಅನುಕೂಲವೇನು ತಿಳಿಯೋಣ.

ಏನಿದು ಹೊಸ ನಿಯಮ?: ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ–2025ರ 10, 11, 12 ಮತ್ತು 13ನೇ ಸೆಕ್ಷನ್ನುಗಳನ್ನು ಜಾರಿಗೆ ತಂದಿದೆ. ಈ ಸೆಕ್ಷನ್ನುಗಳು ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗುವಂತೆ ನಾಮನಿರ್ದೇಶನ, ದಾವೆ ನಿವಾರಣೆ, ಭದ್ರತಾ ಮೊತ್ತ ಸಂಗ್ರಹ ಮತ್ತು ಲಾಕರ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಒಳಗೊಂಡಿವೆ.

ಹೊಸ ನಿಯಮಗಳ ಮುಖ್ಯ ಅಂಶಗಳು

* ಪ್ರತಿ ಖಾತೆಗೆ ಗರಿಷ್ಠ ನಾಲ್ಕು ನಾಮನಿರ್ದೇಶನ: ಗ್ರಾಹಕರು ತಮ್ಮ ಉಳಿತಾಯ ಖಾತೆ, ನಿಶ್ಚಿತ ಠೇವಣಿ, ಲಾಕರ್ ಸೇರಿದಂತೆ ಎಲ್ಲಾ ಠೇವಣಿ ಸೇವೆಗಳಿಗೆ ನಾಲ್ಕು ಜನರನ್ನು ನಾಮನಿರ್ದೇಶನ (ನಾಮಿನಿ) ಮಾಡಬಹುದು. ನಾಮನಿರ್ದೇಶಿತರಿಗೆ ಹಂಚಿಕೆಯನ್ನು ಶೇಕಡಾವಾರು (ಉದಾ: ಪತ್ನಿಗೆ ಶೇ 50, ಮಗನಿಗೆ ಶೇ 30, ಸಹೋದರನಿಗೆ ಶೇ 20) ಆಧಾರದಲ್ಲಿ ಮಾಡಬಹುದು. ಅಥವಾ ಆನುವಂಶಿಕ ಕ್ರಮದಲ್ಲಿ ಕೂಡ ನೀಡಬಹುದು. ಅಂದರೆ ಮೊದಲ ನಾಮನಿರ್ದೇಶಿತ ಲಭ್ಯವಿಲ್ಲದಿದ್ದರೆ ಮುಂದಿನವರಿಗೆ ಹಕ್ಕು ಬರುತ್ತದೆ. ಈ ಬದಲಾವಣೆ ವಿವಾದಗಳನ್ನು ತಪ್ಪಿಸಲು ಮತ್ತು ಆಸ್ತಿ ವರ್ಗಾವಣೆ ವೇಗವಾಗಿ ನಡೆಯಲು ಸಹಕಾರಿಯಾಗುತ್ತದೆ.

* ನಾಮನಿರ್ದೇಶಿತರ ಸಂಪರ್ಕ ವಿವರ ಕಡ್ಡಾಯ: ಪ್ರತಿ ನಾಮನಿರ್ದೇಶಿತರ ಮೊಬೈಲ್ ಸಂಖ್ಯೆ ಮತ್ತು ಇ–ಮೇಲ್ ಐ.ಡಿ ಈಗ ಬ್ಯಾಂಕ್ ದಾಖಲೆಗಳಲ್ಲಿ ಕಡ್ಡಾಯವಾಗಲಿದೆ. ಇದು ಖಾತೆದಾರರ ನಿಧನದ ನಂತರ ವೇಗವಾದ ಪರಿಶೀಲನೆ ಮತ್ತು ಸಂಪರ್ಕಕ್ಕೆ ನೆರವಾಗುತ್ತದೆ.

* ಎಲ್ಲಾ ಬ್ಯಾಂಕ್ಗಳಿಗೆ ಏಕೀಕೃತ ನಿಯಮ: ಈ ನಿಯಮಗಳು ಸರ್ಕಾರಿ, ಖಾಸಗಿ, ಸಹಕಾರ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೂ ಅನ್ವಯಿಸುತ್ತವೆ. ಆರ್ಬಿಐ ಈಗ ಎಲ್ಲಾ ಬ್ಯಾಂಕ್ಗಳಲ್ಲಿ ಏಕರೂಪದ ದಾವೆ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದೆ.

* ಸರಳೀಕೃತ ದಾವೆ ಪರಿಹಾರ ಪ್ರಕ್ರಿಯೆ: ನಾಮನಿರ್ದೇಶಿತರು ಅಥವಾ ಕಾನೂನಾತ್ಮಕ ವಾರಸುದಾರರು ನಿಧನದ ನಂತರ ಖಾತೆಯ ಮೊತ್ತ ಅಥವಾ ಲಾಕರ್ನ ವಸ್ತುಗಳನ್ನು ವೇಗವಾಗಿ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು–2025ರ ಅಡಿಯಲ್ಲಿ ಪ್ರಕ್ರಿಯೆಯ ಮಾದರಿ ಪ್ರಕಟಿಸಲಿದೆ. ಹೊಸ ನಿಯಮವು ಠೇವಣಿ, ಲಾಕರ್ಗಳಿಗೆ ಅನ್ವಯವಾಗಲಿದ್ದು, ಎಲ್ಲದಕ್ಕೂ ಏಕರೂಪದ ಪ್ರಕ್ರಿಯೆ ಜಾರಿಗೆ ಬರಲಿದೆ.

ಏಕೆ ಈ ಬದಲಾವಣೆ ಮುಖ್ಯ?: ಈ ಬದಲಾವಣೆಯಿಂದ ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಹಣಕಾಸಿನ ಭದ್ರತೆ ಮತ್ತು ಮನಃಶಾಂತಿ ದೊರೆಯಲಿದೆ. ನಿಧನದ ನಂತರ ಬ್ಯಾಂಕ್ನಲ್ಲಿರುವ ಠೇವಣಿಗಳು ಕಾನೂನು ಪ್ರಕ್ರಿಯೆಯಲ್ಲಿ ‘ಸಿಕ್ಕಿಹಾಕಿಕೊಳ್ಳುವ’ ಅಪಾಯ ಕಡಿಮೆಯಾಗುತ್ತದೆ. ಸಣ್ಣದಾಗಿ ಕಾಣುವ ಈ ಬದಲಾವಣೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸ ಮತ್ತು ಸುಗಮ ಸೇವೆಗೆ ದೊಡ್ಡ ಹೆಜ್ಜೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.