ಐಫೋನ್, ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್, ಟೆಸ್ಲಾ, ನೆಟ್‌ಫ್ಲಿಕ್ಸ್... ‘ಅಬ್ಬಬ್ಬಾ, ಏನು ಇಷ್ಟು ದೊಡ್ಡ ಜಾಗತಿಕ ಕಂಪನಿಗಳ ಹೆಸರು ಹೇಳುತ್ತಿದ್ದೀರಲ್ಲಾ’ ಎಂದು ಹುಬ್ಬೇರಿಸಬೇಡಿ. ಮನಸ್ಸು ಮಾಡಿದರೆ ನೀವೂ ಈ ಕಂಪನಿಗಳ ಪಾಲುದಾರ ಆಗಬಹುದು! ಆಶ್ಚರ್ಯವೆಂದು ಅನಿಸಿದರೂ, ಅಂತರರಾಷ್ಟ್ರೀಯ/ವಿದೇಶಿ ಮ್ಯೂಚುವಲ್ ಫಂಡ್ ಹೂಡಿಕೆ ವ್ಯವಸ್ಥೆಯೊಳಗೆ ಇಂತಹ ಅವಕಾಶವಿದೆ. ಅಂತರಾರಾಷ್ಟ್ರೀಯ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಹೇಗೆ? ಈ ಫಂಡ್‌ಗಳಲ್ಲಿ ಹೂಡಿಕೆಯಿಂದ ಲಾಭವೋ ನಷ್ಟವೋ?

ಅಂತರರಾಷ್ಟ್ರೀಯ/ವಿದೇಶಿ ಮ್ಯೂಚುವಲ್ ಫಂಡ್ ಎಂದರೇನು? ಭಾರತದ ಮಾರುಕಟ್ಟೆ ಹೊರತುಪಡಿಸಿ ವಿಶ್ವದ ಇತರ ಮಾರುಕಟ್ಟೆಗಳಲ್ಲಿನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ ಅಂತರರಾಷ್ಟ್ರೀಯ ಅಥವಾ ವಿದೇಶಿ ಮ್ಯೂಚುವಲ್ ಫಂಡ್‌ಗಳು. ಜಗತ್ತಿನ ಅತಿ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಮ್ಯೂಚುವಲ್ ಫಂಡ್‌ಗಳು ಅವಕಾಶ ಕಲ್ಪಿಸುತ್ತವೆ.

ವಿದೇಶಿ ಮ್ಯೂಚುವಲ್ ಫಂಡ್ ಹೂಡಿಕೆಗೆ 4 ಪ್ರಮುಖ ಆಯ್ಕೆಗಳು:

1. ಫಂಡ್ ಆಫ್ ಫಂಡ್ಸ್ (F&F): ಹೂಡಿಕೆದಾರ ಮೊದಲಿಗೆ ಭಾರತದ ಮ್ಯೂಚುವಲ್ ಫಂಡ್ ಒಂದರಲ್ಲಿ ಹೂಡಿಕೆ ಮಾಡುತ್ತಾನೆ. ಹೀಗೆ ಮಾಡಿದ ಹೂಡಿಕೆಯನ್ನು ದೇಶಿಯ ಮ್ಯೂಚುವಲ್ ಫಂಡ್ ನಿರ್ವಹಣಾ ಸಂಸ್ಥೆಯು ವಿದೇಶಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಮುಂದಿನ ಹಂತದಲ್ಲಿ ಆ ವಿದೇಶಿ ಮ್ಯೂಚುವಲ್ ಫಂಡ್ ನಿರ್ವಹಣಾ ಸಂಸ್ಥೆಯು, ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತದೆ. ಈ ಅವಕಾಶದಲ್ಲಿ ಹೂಡಿಕೆದಾರ ಪರೋಕ್ಷವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಾನೆ. ಉದಾಹರಣೆ: ಐಸಿಐಸಿಐ ಪ್ರುಡೆನ್ಸಿಯಲ್ ಗ್ಲೋಬಲ್ ಸ್ಟೇಬಲ್ ಈಕ್ವಿಟಿ ಫಂಡ್.

2. ಇಂಡೆಕ್ಸ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್/ಸೂಚ್ಯಂಕ ಆಧಾರಿತ ಇಟಿಎಫ್ (ETF): ಹೂಡಿಕೆದಾರನೊಬ್ಬ ಸೂಚ್ಯಂಕ ಆಧಾರಿತ ಭಾರತದ ಇಟಿಎಫ್‌ನಲ್ಲಿ ಮೊದಲಿಗೆ ಹೂಡಿಕೆ ಮಾಡುತ್ತಾನೆ. ಈ ಫಂಡ್ ನಿರ್ವಹಣೆ ಮಾಡುವವರು ಆ ಹೂಡಿಕೆಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ತೊಡಗಿಸುತ್ತಾರೆ. ಇಲ್ಲೂ ಕೂಡ ಹೂಡಿಕೆದಾರ ಮಾಡುವುದು ಪರೋಕ್ಷ ಹೂಡಿಕೆ. ಉದಾಹರಣೆ: ಮೋತಿಲಾಲ್ ಓಸ್ವಾಲ್ ನ್ಯಾಸ್ ಡ್ಯಾಕ್ -100 ಇಟಿಎಫ್

3. ಫೀಡರ್ ಫಂಡ್: ಸಣ್ಣ ಸಣ್ಣ ಹೂಡಿಕೆಗಳನ್ನು ಸಂಗ್ರಹಿಸಿ ದೊಡ್ಡ ಫಂಡ್ ಒಂದಕ್ಕೆ (ಮಾಸ್ಟರ್ ಫಂಡ್) ಹೂಡಿಕೆ ಮಾಡುವ ವ್ಯವಸ್ಥೆಯನ್ನು ಫೀಡರ್ ಫಂಡ್ ಎನ್ನಲಾಗುತ್ತದೆ. ಮಾಸ್ಟರ್ ಫಂಡ್‌ನಲ್ಲಿ ಸಂಗ್ರಹವಾದ ಮೊತ್ತವನ್ನು ಹೂಡಿಕೆ ಸಲಹೆಗಾರರು ಅನ್ಯ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ತೊಡಗಿಸುತ್ತಾರೆ. ಉದಾಹರಣೆ: ಇನ್ವೆಸ್ಕೊ ಇಂಡಿಯಾ ಫೀಡರ್ – ಇನ್ವೆಸ್ಕೋ ಫ್ಯಾನ್ ಯುರೋಪಿಯನ್ ಈಕ್ವಿಟಿ ಫಂಡ್

4. ಆಕ್ಟಿವ್ಲೀ ಮ್ಯಾನೇಜ್ಡ್ ಫಂಡ್: ಹೂಡಿಕೆದಾರ ತೊಡಗಿಸುವ ಹಣವನ್ನು ಯಾವ ವಿದೇಶಿ ಕಂಪನಿಯಲ್ಲಿ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ಫಂಡ್ ಮ್ಯಾನೇಜರ್ ಮತ್ತು ವೃತ್ತಿಪರರ ತಂಡ ತೀರ್ಮಾನಿಸುತ್ತದೆ. ಈ ರೀತಿಯ ಹೂಡಿಕೆಗಳನ್ನು ಆಕ್ಟಿವ್ಲೀ ಮ್ಯಾನೇಜ್ಡ್ ಫಂಡ್ ಎಂದು ಕರೆಯಲಾಗುತ್ತೆ. ಉದಾಹರಣೆ: ಕೋಟಕ್ ಎಮರ್ಜಿಂಗ್ ಮಾರ್ಕೆಟ್ ರೆಗ್ಯೂಲರ್ ಪ್ಲಾನ್

ಅನುಕೂಲ– ಅನನುಕೂಲ: ಜಾಗತಿಕವಾಗಿ ಎಲ್ಲ ಮಾರುಕಟ್ಟೆಗಳೂ ಏಕ ಕಾಲದಲ್ಲಿ ಕುಸಿತ ಕಾಣುವ ಸಾಧ್ಯತೆ ಇಲ್ಲದಿರುವುದರಿಂದ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ವಿದೇಶಿ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆ. ಅಲ್ಲದೆ ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಿಗೆ ಇರುವುದರಿಂದ ಅದರ ಲಾಭವೂ ಸಿಗುತ್ತದೆ. 2000ನೇ ಇಸವಿಯಲ್ಲಿ ಒಂದು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ₹ 45 ಇತ್ತು. ಈಗ ಅದರ ಮೌಲ್ಯ ₹ 74ರ ಆಸುಪಾಸಿನಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಅದರ ಲಾಭ ಹೂಡಿಕೆದಾರರಿಗೆ ಸಿಗುತ್ತದೆ. ವಿದೇಶಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ರಾಜಕೀಯ ಅಸ್ಥಿರತೆ ಮತ್ತು ಕರೆನ್ಸಿ ಮೌಲ್ಯ ಕಡಿಮೆ ಇರುವಂತಹ ಕಡೆ ಹೂಡಿಕೆ ಮಾಡದಿರುವುದು ಒಳಿತು.

ತೆರಿಗೆ: ವಿದೇಶಿ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದಾಗ ಡೆಟ್ ಮ್ಯೂಚುವಲ್ ಫಂಡ್‌ಗೆ ಅನ್ವಯಿಸುವಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಹೂಡಿಕೆ ಮಾಡಿದ ಮೂರು ವರ್ಷಗಳ ಒಳಗಾಗಿ ಹೂಡಿಕೆ ಮೊತ್ತವನ್ನು ಹಿಂಪಡೆದರೆ ನಿಮ್ಮ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ಎಸ್‌ಟಿಸಿಜಿ ತೆರಿಗೆ ಅನ್ವಯಿಸುತ್ತದೆ. ಆದರೆ ಮೂರು ವರ್ಷಗಳ ನಂತರದಲ್ಲಿ ಹೂಡಿಕೆ ಹಿಂಪಡೆದರೆ ಬೆಲೆ ಸೂಚ್ಯಂಕದ ಏರಿಳಿತಕ್ಕೆ ತಕ್ಕಂತೆ ಇಂಡೆಕ್ಸೇಷನ್ ಒಳಗೊಂಡು ಶೇಕಡ 20ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಗಮನಿಸಿ: ಹಣಕಾಸು ಸಾಕ್ಷರತೆಯ ಉದ್ದೇಶ ಮಾತ್ರದಿಂದ ಈ ಬರಹದಲ್ಲಿ ಕೆಲವು ಕಂಪನಿಗಳ ಹೆಸರು, ಮ್ಯೂಚುವಲ್ ಫಂಡ್‌ಗಳ ಉದಾಹರಣೆ ನೀಡಲಾಗಿದೆ.

ಪ್ರಮೋದ್ ಬಿ.ಪಿ.

ಷೇರುಪೇಟೆಯಲ್ಲಿ ಮುಂದೇನಾಗಲಿದೆ?

ಷೇರುಪೇಟೆಯಲ್ಲಿ ಸತತ ನಾಲ್ಕನೇ ವಾರವೂ ಗೂಳಿ ಓಟ ಮುಂದುವರಿದಿದೆ. ಮೊದಲ ಬಾರಿಗೆ 46 ಸಾವಿರ ಅಂಶಗಳ ಗಡಿ ದಾಟಿರುವ ಸೆನ್ಸೆಕ್ಸ್ ಮತ್ತು 13,500 ಅಂಶಗಳ ಗಡಿ ದಾಟಿರುವ ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿವೆ. 46,099 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇಕಡ 2.2ರಷ್ಟು ಜಿಗಿದಿದ್ದರೆ, 13,513 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇಕಡ 1.9ರಷ್ಟು ಏರಿಕೆ ದಾಖಲಿಸಿದೆ.

ವಲಯವಾರು ಪ್ರಗತಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 7.7ರಷ್ಟು ಹೆಚ್ಚಳ ಕಂಡಿದೆ. ಎಫ್‌ಎಂಸಿಜಿ ಶೇ 6.3ರಷ್ಟು ಮತ್ತು ಇಂಧನ ಮತ್ತು ತೈಲ ವಲಯ ಶೇ 3ರಷ್ಟು ಜಿಗಿದಿವೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಸೂಚ್ಯಂಕ ಶೇ 0.7ರಷ್ಟು ಏರಿಕೆ ಕಂಡಿದ್ದರೆ ಸ್ಮಾಲ್ ಕ್ಯಾಪ್ ಶೇ 1.3ರಷ್ಟು ಹೆಚ್ಚಳ ಕಂಡಿದೆ. ಡಿಸೆಂಬರ್‌ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 29,870 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಗಳಿಕೆ– ಇಳಿಕೆ: ನಿಫ್ಟಿಯಲ್ಲಿ ಐಟಿಸಿ ಶೇ 9ರಷ್ಟು, ಹಿಂದೂಸ್ಥಾನ್ ಯುನಿಲಿವರ್ ಶೇ 9ರಷ್ಟು, ಒಎನ್‌ಜಿಸಿ ಶೇ 8ರಷ್ಟು, ಜಿಐಎಎಲ್ ಶೇ 5ರಷ್ಟು, ರಿಲಯನ್ಸ್ ಶೇ 4ರಷ್ಟು ಗಳಿಸಿವೆ. ಯುಪಿಎಲ್ ಶೇ 5ರಷ್ಟು, ಶ್ರೀ ಸಿಮೆಂಟ್ ಶೇ 4.5ರಷ್ಟು, ಹಿಂಡಾಲ್ಕೊ ಶೇ 3.6ರಷ್ಟು, ಐಷರ್ ಶೇ 3.2ರಷ್ಟು ಮತ್ತು ಮಹಿಂದ್ರ ಆ್ಯಂಡ ಮಹಿಂದ್ರ ಶೇ 3ರಷ್ಟು ಕುಸಿದಿವೆ.

ವಿದೇಶಿ ಮಾರುಕಟ್ಟೆಗಳಲ್ಲೂ ಏರಿಕೆ: ಭಾರತದಲ್ಲಿ ನಿಫ್ಟಿ ಸೂಚ್ಯಂಕ ಡಿಸೆಂಬರ್‌ನಲ್ಲಿ ಶೇ 4.3ರಷ್ಟು ಏರಿಕೆ ದಾಖಲಿಸಿದ್ದರೆ, ದಕ್ಷಿಣ ಕೊರಿಯಾ ಶೇ 6.9ರಷ್ಟು, ತೈವಾನ್ ಶೇ 4ರಷ್ಟು, ಬ್ರೆಜಿಲ್ ಶೇ 5.7ರಷ್ಟು ಮತ್ತು ರಷ್ಯಾ ಶೇ 9.3ರಷ್ಟು ಹೆಚ್ಚಳ ಕಂಡಿವೆ.

ಐಪಿಒ: ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್ ಲಿ.ನ ಐಪಿಒ ಡಿಸೆಂಬರ್ 15 ರಂದು ಆರಂಭವಾಗಲಿದೆ.

ಮುನ್ನೋಟ: ಷೇರುಪೇಟೆ ಸೂಚ್ಯಂಕಗಳು ಈಗ ಗೂಳಿಯ ಹಿಡಿತದಲ್ಲಿದ್ದು ಪ್ರತಿ ಕುಸಿತದಲ್ಲೂ ಖರೀದಿ ಭರಾಟೆ ಮುಂದುವರಿದಿದೆ. ಕೋವಿಡ್–19ಕ್ಕೆ ಲಸಿಕೆ ಇನ್ನೇನು ಎಲ್ಲರಿಗೂ ಸಿಗಲಿದೆ ಎನ್ನುವ ವಿಶ್ವಾಸ, ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜನ್ನು ಸರ್ಕಾರಗಳು ಘೋಷಿಸಲಿವೆ ಎನ್ನುವ ನಂಬಿಕೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆಯಲ್ಲಿ ಗೂಳಿ ಓಟಕ್ಕೆ ಕಾರಣವಾಗಿವೆ.

ಡಾಲರ್ ಮೌಲ್ಯ ನಿರೀಕ್ಷಿತ ಮಟ್ಟದ ಚೇತರಿಕೆ ಕಾಣದಿರುವುದು ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಅನುಕೂಲಕರವಾಗಿದೆ. ತೈಲ ಬೆಲೆ ಏರಿಕೆ ಬಗ್ಗೆ ಗ್ರಾಹಕ ತಲೆಕೆಡಿಸಿಕೊಂಡಿದ್ದರೂ ಷೇರು ಮಾರುಕಟ್ಟೆಗೆ ಈವರೆಗೆ ಅದರ ಬಿಸಿ ತಾಕಿಲ್ಲ. ಸದ್ಯದ ಸ್ಥಿತಿಯಲ್ಲಿ ಅತಿ ಆಸೆಗೆ ಬೀಳದೆ ಕಂಪನಿಗಳ ಮೌಲ್ಯ ಆಧರಿಸಿ ಹೂಡಿಕೆ ಮಾಡಲು ತೊಂದರೆ ಇಲ್ಲ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.