ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯಕ್ಕೆ ಭಾರಿ ಕೊಡುಗೆ?

Last Updated 14 ಆಗಸ್ಟ್ 2020, 21:16 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಉತ್ಪನ್ನಗಳ ಆಮದು ನಿರ್ಬಂಧಿಸಿರುವ ಕೇಂದ್ರ ಸರ್ಕಾರವು ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸಲು ಮುಂದೆ ಬರುವವರಿಗೆ ವಿನಾಯಿತಿಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆ ಇದೆ. ಉದ್ಯಮಿಗಳು ಬಯಸಿದ ಕಡೆ ಸುಲಭವಾಗಿ ಜಮೀನುಕೊಡಿಸುವುದು, ತೀರಾ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಈ ವಿನಾಯಿತಿಗಳ ಭಾಗವಾಗಬಹುದು.

ಪ್ರತ್ಯೇಕ ಹಣಕಾಸು ಸಂಸ್ಥೆಯೊಂದನ್ನು ತೆರೆದು, ಅದರ ಮೂಲಕ ಶೇಕಡ 5 ಅಥವಾ ಶೇ 6ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವ ಚಿಂತನೆಯೂ ಸರ್ಕಾರಕ್ಕಿದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಕೊಡುಗೆಗಳನ್ನು ನೀಡಲು ಕೇಂದ್ರವು 20 ವಲಯಗಳನ್ನು ಗುರುತಿಸಿದೆ. ಜವಳಿ, ಚರ್ಮದ ಉತ್ಪನ್ನಗಳು, ಕೈಗಾರಿಕಾ ಯಂತ್ರೋಪಕರಣಗಳ ತಯಾರಿಕಾ ವಲಯಗಳು ಇವುಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.

‘ಕೈಗಾರಿಕಾ ವಲಯಕ್ಕೆ ಇನ್ನೂ ಹೆಚ್ಚಿನ ಕೊಡುಗೆಗಳು ಸಿಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಡುವ ಭಾಷಣದಲ್ಲಿ ಈ ವಲಯಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು ಹೆಚ್ಚಿನ ವಿವರಗಳು ಇರಬಹುದು’ ಎಂದು ಮೂಲಗಳು ವಿವರಿಸಿವೆ.

ಭೂಬ್ಯಾಂಕ್‌ ಪೋರ್ಟಲ್‌ಗಾಗಿ ಆರು ರಾಜ್ಯಗಳ ವ್ಯಾಪ್ತಿಯಲ್ಲಿ ಒಟ್ಟು 5 ಲಕ್ಷ ಹೆಕ್ಟೇರ್‌ ಜಮೀನು ಗುರುತಿಸಲಾಗಿದೆ. ಉದ್ಯಮಿಗಳು ಲಭ್ಯವಿರುವ ಜಮೀನಿನ ಪರಿಶೀಲನೆಯನ್ನುಈ ಪೋರ್ಟಲ್‌ ಮೂಲಕ ನಡೆಸಬಹುದು. ಈ ವ್ಯವಸ್ಥೆ ಶೀಘ್ರವೇ ಆರಂಭಗೊಳ್ಳಲಿದೆ. ಉತ್ತರ ಪ್ರದೇಶದ ಮಾದರಿಯಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಿಸುವ ವಿಚಾರವಾಗಿಯೂ ಕೇಂದ್ರವು ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT