ನವ ದೆಹಲಿ: ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಆರಂಭವಾದ ವಹಿವಾಟು ಸಕಾರಾತ್ಮಕವಾಗಿ ಮುಂದುವರಿದಿದ್ದು, ಹೂಡಿಕೆದಾರರ ಆಶಾದಾಯಕ ವಾರದ ನಿರೀಕ್ಷೆಯಲ್ಲಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ ಹಿಂದಿನ ವಾರಗಳ ಒಂದಷ್ಟು ಗಳಿಕೆಯೊಂದಿಗೆ ಈ ವಾರವೂ ಸಾಗಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ವಹಿವಾಟು ಶೇ 0.4 ಹಾಗೂ ಶೇ 0.5ರ ಆಸುಪಾಸಿನಲ್ಲಿವೆ. ಹಣದುಬ್ಬರ ಸತತವಾಗಿ ಕುಸಿಯುತ್ತಿದೆ (18 ತಿಂಗಳ ಹಿಂದಿನ ದರದಲ್ಲಿದೆ). ಇದು ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಅದು ಸಕಾರಾತ್ಮಕ ಪರಿಣಾಮ ಬೀರಿದೆ.
ಆರ್‌ಬಿಐ ಗೌರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐನ ವಿತ್ತೀಯ ನೀತಿ ಸಮಿತಿಯು ಮೂರು ದಿನಗಳ ಕಾಲ ನಿರಂತರ ಸಭೆ ನಡೆಸಿದೆ. ಸಭೆಯ ನಿರ್ಣಯ ಜೂನ್ 8ರಂದು ಹೊರಬೀಳಲಿದೆ.
ಎಸ್‌ಬಿಐಯ ಅಧ್ಯಯನ ತಂಡವು, ರೆಪೊ ದರ ಸ್ಥಿರತೆಯನ್ನು ಆರ್‌ಬಿಯ ಕಾಯ್ದುಕೊಳ್ಳಲಿದೆ ಎಂದು ನಿರೀಕ್ಷಿಸಿದೆ.