‘ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ’ (ಸೆಬಿ) ನಿರ್ದೇಶನದ ಅನ್ವಯ, ಡಿಮ್ಯಾಟ್ ರೂಪದಲ್ಲಿ ಇಲ್ಲದ ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ಆನ್ಲೈನ್ ಮೂಲಕವೇ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವ ಅವಕಾಶ ಇದೆ. ಈ ಸೌಲಭ್ಯವು ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳನ್ನು (ಇಟಿಎಫ್) ಹೊರತುಪಡಿಸಿ ಇತರ ಎಲ್ಲ ಮ್ಯೂಚುವಲ್ ಫಂಡ್ಗಳಿಗೆ ಅನ್ವಯಿಸುತ್ತದೆ. ಈ ಮಹತ್ವದ ವ್ಯವಸ್ಥೆಯು ಈಚೆಗಷ್ಟೇ ಜಾರಿಗೆ ಬಂದಿದೆ. ಇದು ಹೂಡಿಕೆದಾರರಿಗೆ ಬಹಳ ಅನುಕೂಲ ಕಲ್ಪಿಸುವುದರ ಜೊತೆಗೆ ಸುರಕ್ಷಿತವೂ ಆಗಿದೆ.

ಈ ವ್ಯವಸ್ಥೆಯು ಜಾರಿಗೆ ಬರುವ ಮೊದಲು, ಡಿಮ್ಯಾಟ್ ರೂಪದಲ್ಲಿ ಇಲ್ಲದ ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವುದು ತೀರಾ ಜಟಿಲವಾದ ಕೆಲಸವಾಗಿತ್ತು. ಹೂಡಿಕೆದಾರರು ತಮ್ಮ ಎಂ.ಎಫ್. ಯೂನಿಟ್ಗಳನ್ನು ಬೇರೊಬ್ಬರ ಹೆಸರಿಗೆ ವರ್ಗಾಯಿಸಲು ಬಯಸಿದರೆ, ಅವರು ಮೊದಲು ಆ ಯೂನಿಟ್ಗಳನ್ನು ಡಿಮ್ಯಾಟ್ ಖಾತೆಗೆ ಪರಿವರ್ತಿಸಬೇಕಾಗಿತ್ತು. ಈ ಪ್ರಕ್ರಿಯೆಯನ್ನು ‘ಡಿಮೆಟೀರಿಯಲೈಸೇ ಷನ್’ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಸವಾಲಿನಿಂದ ಕೂಡಿತ್ತು.

ಆದರೆ, ಹೊಸ ವ್ಯವಸ್ಥೆಯು ಈ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಹೊಸ ವ್ಯವಸ್ಥೆಯ ಅಡಿಯಲ್ಲಿ ಯೂನಿಟ್ಗಳ ವರ್ಗಾವಣೆ ಹೇಗೆ ಎಂಬುದನ್ನು ತಿಳಿಯೋಣ.

ಯಾವುದಕ್ಕೆ ಅನ್ವಯ?:

* ಇಟಿಎಫ್ ಹೊರತುಪಡಿಸಿ ಎಲ್ಲ ಮ್ಯೂಚುವಲ್ ಫಂಡ್ ಯೋಜನೆಗಳಿಗೆ ಈ ಆನ್ಲೈನ್ ವರ್ಗಾವಣೆ ಸೌಲಭ್ಯ ಲಭ್ಯ.

* ಯೂನಿಟ್ಗಳ ಭಾಗಶಃ ವರ್ಗಾವಣೆಗೂ ಅವಕಾಶ ಇದೆ. ಹೀಗೆ ಭಾಗಶಃ ವರ್ಗಾವಣೆ ಆದ ನಂತರದಲ್ಲಿ ಉಳಿಯುವ ಯೂನಿಟ್ಗಳು ಕನಿಷ್ಠ ಮಿತಿಗಿಂತ ಕಡಿಮೆ ಆಗಿದ್ದರೆ ಅವು ಸ್ವಯಂಚಾಲಿತವಾಗಿ ರಿಡೀಮ್ ಆಗುತ್ತವೆ.

ಏನು ಬೇಕು?:

ವರ್ಗಾವಣೆ ಮಾಡಲು ಬಯಸುವವರು (Transferor) ಈ ಅಗತ್ಯಗಳನ್ನು ಪೂರೈಸಬೇಕು:

* ಅವರು ಸರಿಯಾದ ಬಗೆಯಲ್ಲಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿರಬೇಕು.

* ಅವರ ಎಂ.ಎಫ್. ಯೂನಿಟ್ಗಳು ಯಾವುದೇ ಲಾಕ್–ಇನ್ ಅವಧಿಯನ್ನು ಪೂರ್ಣಗೊಳಿಸಿರಬೇಕು, ಇತರ ಯಾವುದೇ ಅಡಮಾನಗಳಿಂದ ಮುಕ್ತವಾಗಿರಬೇಕು.

ವರ್ಗಾವಣೆ ಪಡೆಯುವವರಿಗೆ (Transferee) ಇವು ಅಗತ್ಯ:

* ಮಾನ್ಯವಾದ ಫೋಲಿಯೊ ಹೊಂದಿರಬೇಕು ಅಥವಾ ಶೂನ್ಯ-ಬ್ಯಾಲೆನ್ಸ್ ಫೋಲಿಯೊ ಹೊಂದಿರಬೇಕು.

* ಅವರು ಕೆವೈಸಿ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿರಬೇಕು. ಪ್ಯಾನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಒದಗಿಸಬೇಕು.

ವರ್ಗಾವಣೆಯ ವಿಧಾನ ಹೇಗೆ

ಆನ್ಲೈನ್ ಮೂಲಕ ಮಾತ್ರ ಸಿಗುವ ಸೌಲಭ್ಯ:

* ಈ ಸೌಲಭ್ಯವು ಕೇವಲ ಆರ್ಟಿಎ ಮತ್ತು ‘ಎಂಎಫ್ ಸೆಂಟ್ರಲ್’ ಪೋರ್ಟಲ್ಗಳ ಮೂಲಕ ಲಭ್ಯ.

* ಭೌತಿಕವಾಗಿ, ಷೇರುಪೇಟೆ ಮೂಲಕ ಅಥವಾ ಮೂರನೇ ವ್ಯಕ್ತಿ ನಿರ್ವಹಿಸುವ ವೇದಿಕೆಗಳ ಮೂಲಕ ಸಲ್ಲಿಸಿದ ವರ್ಗಾವಣೆ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ.

ಆನ್ಲೈನ್ ಮೂಲಕ ಮಾತ್ರ ಸಿಗುವ ಸೌಲಭ್ಯದ ಪ್ರಯೋಜನಗಳು:

* ನಕಲಿ ವರ್ಗಾವಣೆಗಳನ್ನು ತಡೆಯಲು ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ತಕ್ಷಣವೇ ತಡೆಹಿಡಿಯಬಹುದು.

* ವರ್ಗಾವಣೆ ಮಾಡುವವರು ಮತ್ತು ವರ್ಗಾವಣೆ ಪಡೆಯುವವರ ಫೋಲಿಯೊಗಳು ಸರಿಯಾಗಿ ಇವೆಯೇ ಎಂಬುದನ್ನು ಪರಿಶೀಲಿಸಲು ಆಗುತ್ತದೆ.

* ಮುದ್ರಾಂಕ ಶುಲ್ಕ (stamp duty) ಲೆಕ್ಕಾಚಾರ ಮತ್ತು ಆನ್ಲೈನ್ ಮೂಲಕ ಅದರ ಸಂಗ್ರಹ ಸ್ವಯಂಚಾಲಿತವಾಗಿ ನಡೆಯುತ್ತದೆ.

ಮುದ್ರಾಂಕ ಶುಲ್ಕ ಪಾವತಿ ಜವಾಬ್ದಾರಿ: ಮ್ಯೂಚುವಲ್ ಫಂಡ್ ಯೂನಿಟ್ಗಳನ್ನು ವರ್ಗಾವಣೆ ಮಾಡುವವರು ಈ ಶುಲ್ಕವನ್ನು ಭರಿಸಬೇಕು.

* ಲೆಕ್ಕಾಚಾರದ ಆಧಾರ: ವರ್ಗಾವಣೆ ವಿನಂತಿಯ ಸಮಯದಲ್ಲಿ ಲಭ್ಯವಿರುವ ಕೊನೆಯ ಎನ್ಎವಿ (ನೆಟ್ ಅಸೆಟ್ ವ್ಯಾಲ್ಯೂ) ಆಧಾರದ ಮೇಲೆ ಮುದ್ರಾಂಕ ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ.

ಕಾರ್ಯವಿಧಾನ ಹೇಗೆ?

* ಪ್ರಾರಂಭ: ವರ್ಗಾವಣೆ ಮಾಡುವವರು ಆರ್ಟಿಎ/ಎಂಎಫ್ ಸೆಂಟ್ರಲ್ ಪೋರ್ಟಲ್ಗೆ ಲಾಗ್–ಇನ್ ಮಾಡಿ,
ವರ್ಗಾಯಿಸಬೇಕಾದ ಫೋಲಿಯೊ ಮತ್ತು ಯೂನಿಟ್ಗಳನ್ನು ಆಯ್ಕೆ ಮಾಡುತ್ತಾರೆ.

* ದೃಢೀಕರಣ: ಕೆವೈಸಿ ಸರಿಯಾಗಿದೆಯೇ, ಮ್ಯೂಚುವಲ್ ಫಂಡ್ ಯೂನಿಟ್ಗಳು ಯಾವುದೇ ವ್ಯಾಜ್ಯಗಳಿಗೆ ಒಳಪಟ್ಟಿವೆಯೇ, ವರ್ಗಾವಣೆ ಹಾಗೂ ಸ್ವೀಕಾರಕ್ಕೆ ಎರಡೂ ಕಡೆಯವರು ಅರ್ಹರೇ ಎಂಬ ಪರಿಶೀಲನೆಗಳು ನಡೆಯುತ್ತವೆ.

* ಅನುಮೋದನೆ: ಎರಡು ಹಂತಗಳ ಒಟಿಪಿ ದೃಢೀಕರಣವು ಸುರಕ್ಷಿತ ವರ್ಗಾವಣೆಯನ್ನು ಖಚಿತಪಡಿಸುತ್ತದೆ.

* ಮುದ್ರಾಂಕ ಶುಲ್ಕ ಪಾವತಿ: ವರ್ಗಾವಣೆ ಪ್ರಕ್ರಿಯೆಯ ಮೊದಲು, ವರ್ಗಾವಣೆ ಮಾಡುವವರು ಮುದ್ರಾಂಕ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸುತ್ತಾರೆ.

* ಅನುಷ್ಠಾನ: ಆರ್ಟಿಎ ಈ ವರ್ಗಾವಣೆಯನ್ನು ಎರಡು ಕೆಲಸದ ದಿನಗಳೊಳಗೆ ಜಾರಿಗೆ ತಂದು, ಎರಡೂ
ಕಡೆಯವರಿಗೆ ನವೀಕರಿಸಿದ ಫೊಲಿಯೊ ವಿವರಗಳನ್ನು (ಎಸ್ಒಎ) ನೀಡುತ್ತವೆ ಮತ್ತು ತೆರಿಗೆ ಉದ್ದೇಶಗಳಿಗಾಗಿ ವಹಿವಾಟನ್ನು ವರದಿ ಮಾಡುತ್ತವೆ.

ಕೆಲವು ನಿರ್ಬಂಧಗಳು ಮತ್ತು ಸುರಕ್ಷತೆಗಳು:

* ವರ್ಗಾವಣೆ ನಂತರದ 10 ದಿನಗಳವರೆಗೆ ವರ್ಗಾಯಿಸಿದ ಯೂನಿಟ್ಗಳನ್ನು ನಗದೀಕರಿಸಿಕೊಳ್ಳುವುದಕ್ಕೆ ನಿರ್ಬಂಧವಿದೆ, ಇದರಿಂದ ವಂಚನೆಯ ಅಪಾಯ ತಗ್ಗಿಸಬಹುದು.

* ರೆಕಾರ್ಡ್ ದಿನಾಂಕದಂದು (record date) ಮಾಡಿದ ವರ್ಗಾವಣೆ ವಿನಂತಿಗಳಿಗೆ ಸಂಬಂಧಿಸಿದ ಡಿವಿಡೆಂಡ್ ಪಾವತಿಗಳು ಹಾಗೂ ಮರುಹೂಡಿಕೆಗಳು ವರ್ಗಾವಣೆ ಮಾಡುವವರಿಗೆ ಸೇರುತ್ತವೆ.

ಸೆಬಿ ಜಾರಿಗೆ ತಂದಿರುವ ಈ ಹೊಸ ಮಾರ್ಗಸೂಚಿಗಳು ಹಿಂದೆ ಜಾರಿಯಲ್ಲಿದ್ದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಿವೆ. ಯಾವುದೇ ಕಾಗದಪತ್ರದ, ಕಚೇರಿ ಓಡಾಟದ ಅವಶ್ಯಕತೆ ಇಲ್ಲದೆ ವರ್ಗಾವಣೆಯ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ.

ಲೇಖಕ, ಚಾರ್ಟರ್ಟ್ ಅಕೌಂಟೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.