ಪಾಂಡುರಂಗ ಭಯ್ಯಾ, ಕಲಬುರ್ಗಿ

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 76 ವರ್ಷ. ವಾರ್ಷಿಕ ಪಿಂಚಣಿ ₹ 5.42 ಲಕ್ಷ, ಠೇವಣಿ ಮೇಲಿನ ವಾರ್ಷಿಕ ಬಡ್ಡಿ ₹ 1.35 ಲಕ್ಷ. ತೆರಿಗೆ ಹಾಗೂ ರಿಟರ್ನ್ಸ್ ಮಾಹಿತಿ ಕೊಡಿ.

ಉತ್ತರ: ನಿಮ್ಮ ಪಿಂಚಣಿ ಹಾಗೂ ಬಡ್ಡಿ ಸೇರಿಸಿದರೆ ವಾರ್ಷಿಕ ಆದಾಯ ₹ 6.77 ಲಕ್ಷ. ಸೆಕ್ಷನ್ 16, ಸ್ಟ್ಯಾಂಡರ್ಡ್ ಡಿಡಕ್ಷನ್, ಸೆಕ್ಷನ್ 80ಟಿಟಿಬಿ ಆಧಾರದ ಮೇಲೆ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ವಿನಾಯಿತಿ... ಹೀಗೆ ಒಟ್ಟಿನಲ್ಲಿ ₹ 1 ಲಕ್ಷ ಕಳೆಯಬಹುದು. ಹೀಗೆ ಮಾಡಿದಲ್ಲಿ ನಿಮ್ಮ ವಾರ್ಷಿಕ ಆದಾಯ ₹ 5.77 ಲಕ್ಷ ಆಗುತ್ತದೆ. ನೀವು ನಿಮ್ಮ ಉಳಿತಾಯದ ಬಗ್ಗೆ ತಿಳಿಸಿಲ್ಲ. ಸೆಕ್ಷನ್ 80ಸಿ ಅಡಿಯಲ್ಲಿ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿ ಅಥವಾ 5 ವರ್ಷಗಳ ತೆರಿಗೆ ಉಳಿಸುವ ಬ್ಯಾಂಕ್ ಠೇವಣಿ ಮಾಡಿದ್ದರೆ ಆ ಮೊತ್ತವನ್ನು ₹ 5.77 ಲಕ್ಷದಿಂದ ಕಳೆಯಬಹುದಿತ್ತು. ಹೀಗೆ ಮಾಡಿದರೆ, ನಿಮ್ಮ ವಾರ್ಷಿಕ ಆದಾಯ ₹ 5 ಲಕ್ಷದೊಳಗೆ ಬರುತ್ತದೆ. ಆಗ ನಿಮಗೆ ಆದಾಯ ತೆರಿಗೆ ಇರುವುದಿಲ್ಲ. ಸೆಕ್ಷನ್ 80ಸಿ ಅಡಿ ಉಳಿತಾಯ ಮಾಡದಿದ್ದಲ್ಲಿ ₹ 3 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ತೆರಿಗೆ ಕೊಡಬೇಕಾಗುತ್ತದೆ. ನೀವು ವಿನಾಯಿತಿ ಪಡೆದು, ತೆರಿಗೆಗೆ ಒಳಗಾಗದಿದ್ದರೂ ಐ.ಟಿ. ರಿಟರ್ನ್ಸ್ ಸಲ್ಲಿಸಲೇಬೇಕು.

ಶ್ರೀಕಂಠಯ್ಯ, ಬೆಂಗಳೂರು

ಪ್ರಶ್ನೆ: ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಕೊಡುತ್ತದೆ ಎಂಬ ಜಾಹೀರಾತು ಬರುತ್ತಿದೆ. ಇಲ್ಲಿ ಬೇರೆ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್ಗಳಿಗಿಂತ ಹೆಚ್ಚಿನ ಬಡ್ಡಿ ಕೊಡುವುದಾಗಿ ಹೇಳಲಾಗುತ್ತಿದೆ. ಇಲ್ಲಿ ಠೇವಣಿ ಇಟ್ಟರೆ ಡಿಐಸಿಜಿಸಿ ಖಾತರಿ ಇದೆಯೇ? ಇದು ವಾಣಿಜ್ಯ ಅಥವಾ ಸಹಕಾರಿ ಬ್ಯಾಂಕ್ನ ಅಡಿ ಬರುತ್ತದೆಯೇ? ಆರ್ಬಿಐ ನಿಗಾ ಈ ಬ್ಯಾಂಕ್ನ ಮೇಲೆ ಇದೆಯೇ?

ಉತ್ತರ: ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಂದು ವಾಣಿಜ್ಯ ಬ್ಯಾಂಕ್. ಸಣ್ಣ ಸಾಲ ವಿತರಿಸುವುದು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಈ ಬ್ಯಾಂಕ್ನ ಉದ್ದೇಶ. ಈ ಬ್ಯಾಂಕ್ ಅನ್ನು ಉಳಿದ ಎಲ್ಲಾ ಬ್ಯಾಂಕ್ಗಳಂತೆ ಆರ್ಬಿಐ ನಿಯಂತ್ರಿಸುತ್ತಿದೆ. ಇಲ್ಲಿ ಇರಿಸುವ ಠೇವಣಿಗೆ ₹ 5 ಲಕ್ಷಗಳ ತನಕ ಡಿಐಸಿಜಿಸಿ (Deposit Insurance and Credit Guarantee Corporation) ಗ್ಯಾರಂಟಿ ಇದೆ.

ವಿ.ಎಂ. ಶಿವರಾಮು, ಮೈಸೂರು

ಪ್ರಶ್ನೆ: ಕಾಸ್ಟ್ ಆಫ್ ಇನ್ಫ್ಲೇಷನ್ ಲೆಕ್ಕ ತಿಳಿಯಲು ಯಾರ ನೆರವು ಅಗತ್ಯವಿದೆ? ನಾನು 20 ವರ್ಷದ ಮನೆ ಮಾರಿದ್ದು ಆ ಹಣ ಸದ್ಯ ಕ್ಯಾಪಿಟಲ್ ಗೇನ್ ಖಾತೆಯಲ್ಲಿ ಇರಿಸಲಾಗಿದೆ. ಈ ಹಣದಿಂದ ಪತ್ನಿ ಹೆಸರಿನಲ್ಲಿ ನಿವೇಶನ ಕೊಂಡು ಮನೆ ಕಟ್ಟಿಸಿದರೆ ಸಮಸ್ಯೆಯಾಗಬಹುದೇ? ಈಗಾಗಲೇ ಮಾರಾಟ ಮಾಡಿದ ಮನೆ ನನ್ನ ಹೆಸರಿನಲ್ಲಿತ್ತು.

ಉತ್ತರ: ಓರ್ವ ವ್ಯಕ್ತಿ ತನ್ನ ಹೆಸರಿನಲ್ಲಿರುವ ಸ್ಥಿರ ಆಸ್ತಿ ಮಾರಾಟ ಮಾಡಿ ಬಂದಿರುವ ಹಣದಿಂದ ಬೇರೊಂದು ಮನೆ ಕಟ್ಟುವಲ್ಲಿ ಅಥವಾ ಕೊಳ್ಳುವಲ್ಲಿ ಆತನಿಗೆ ಬಂಡವಾಳ ವೃದ್ಧಿ ತೆರಿಗೆ ಅನ್ವಯ ಆಗುವುದಿಲ್ಲ. ಹೀಗೆ ಮಾಡುವಾಗ ಆಸ್ತಿ ಮಾರಾಟ ಮಾಡಿದ ವ್ಯಕ್ತಿ, ತನ್ನ ಹೆಸರಿನಲ್ಲಿಯೇ ನಿವೇಶನ ಮನೆ ಖರೀದಿಸಬೇಕಾಗುತ್ತದೆ. ನೀವು ನಿಮ್ಮ ಹೆಸರಿನಲ್ಲಿರುವ ಮನೆ ಮಾರಾಟ ಮಾಡಿದ್ದು, ಪತ್ನಿಯ ಹೆಸರಿನಲ್ಲಿ ನಿವೇಶನ ಕೊಂಡು ಮನೆ ಕಟ್ಟಲು ಬರುವುದಿಲ್ಲ. ತೆರಿಗೆ ಉಳಿಸಲು ನಿಮ್ಮ ಹೆಸರಿನಲ್ಲಿಯೇ ಮನೆ ಕಟ್ಟಬೇಕಾಗುತ್ತದೆ. ಕಾಸ್ಟ್ ಆಫ್ ಇನ್ಫ್ಲೇಷನ್ ವಿಚಾರದಲ್ಲಿ ಬೇಸ್ ಇಯರ್ ಅನ್ನು ಸರ್ಕಾರ ನಿಗದಿಪಡಿಸುತ್ತದೆ. 2001–02 ಬೇಸ್ ಇಯರ್ ಆಗಿದೆ. 2001–02ರಲ್ಲಿ ಕಾಸ್ಟ್ ಆಫ್ ಇನ್ಫ್ಲೇಷನ್ 100 ಇತ್ತು. 2019–20ರಲ್ಲಿ ಕಾಸ್ಟ್ ಆಫ್ ಇನ್ಫ್ಲೇಷನ್ 289 ಇದೆ.

ಬಸವರಾಜು, ಮಂಡ್ಯ

ಪ್ರಶ್ನೆ: ನಾನು 1989–90ನೇ ಸಾಲಿನಲ್ಲಿ ಮಂಡ್ಯದಲ್ಲಿ ₹ 33 ಸಾವಿರಕ್ಕೆ ನಾಲ್ಕು ಗುಂಟೆ ನಿವೇಶನ ಖರೀದಿಸಿದ್ದೆ. ನಂತರ ಅಭಿವೃದ್ಧಿ ಶುಲ್ಕವಾಗಿ ₹ 22,405 ಹಾಗೂ ಜಾಗದಲ್ಲಿ₹ 50 ಸಾವಿರ ಖರ್ಚು ಮಾಡಿದ್ದೇನೆ. 2019ರ ಅಕ್ಟೋಬರ್ 10ರಂದು ನಿವೇಶನವನ್ನು ₹ 46 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ನೋಂದಣಿ ಶುಲ್ಕ ₹ 2 ಲಕ್ಷ, ಖರೀದಿದಾರರು ಹಾಗೂ ದಲ್ಲಾಳಿಗಳಿಗೆ ₹ 1 ಲಕ್ಷ ಧನಾದೇಶದ ಮೂಲಕ ಕೊಟ್ಟೆ. ಉಳಿದ ₹ 43 ಲಕ್ಷ ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದೇನೆ. ದೀರ್ಘಾವಧಿ ಬಂಡವಾಳ ವೃದ್ಧಿಯಂತೆ ₹ 9 ಲಕ್ಷ ಕಳೆದು ₹ 37 ಲಕ್ಷಕ್ಕೆ ಶೇ 20ರಷ್ಟು ತೆರಿಗೆ ಪಾವತಿಸಬೇಕು ಎನ್ನುತ್ತಾರೆ ನಮ್ಮ ಆಡಿಟರ್. ನನ್ನ ಪ್ರಕಾರ ಇದು ಶೇ 10ರಷ್ಟು ಮಾತ್ರ. ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ: ನಿಮ್ಮ ಆಡಿಟರ್ ತಿಳಿಸಿರುವುದು ಸರಿ. ಬಂಡವಾಳ ವೃದ್ಧಿ ತೆರಿಗೆ ಶೇ 20ರಷ್ಟು ಇದೆ. ಸಂಪೂರ್ಣ ತೆರಿಗೆ ಉಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಗ್ರಾಮೀಣ ವಿದ್ಯುದೀಕರಣ ಬಾಂಡ್ಗಳಲ್ಲಿ ಹಣ ತೊಡಗಿಸಬಹುದಿತ್ತು. ಈ ಹಣವನ್ನು ಇನ್ನೊಂದು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದ್ದರೆ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ನಿಮ್ಮ ಹೆಸರಿನಲ್ಲಿಯೇ ಮನೆ ಕೊಳ್ಳಬೇಕು. ಕುಟುಂಬದವರ ಹೆಸರಿನಲ್ಲಿ ಕೊಳ್ಳಲು ಅಥವಾ ನಿರ್ಮಿಸಲು ಅವಕಾಶವಿಲ್ಲ.

ಯು.ಪಿ. ಪುರಾಣಿಕ್

-ಬ್ಯಾಂಕಿಂಗ್ ಹಣಕಾಸು ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.