ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಆದಾಯ ತೆರಿಗೆ ರಿಟರ್ನ್ಸ್‌ ವಿಚಾರದಲ್ಲಿ ಸಲಹೆ ನೀಡಿ

Last Updated 14 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

- ಎಂ.ಆರ್‌. ರಾಮಚಂದ್ರ, ದೇವದುರ್ಗ

ನಾನು ನಿವೃತ್ತ ಹೈಸ್ಕೂಲ್ ಮುಖ್ಯೋಪಾಧ್ಯಾಯ. ವಯಸ್ಸು 85. ಮಾಸಿಕ ಪಿಂಚಣಿ ₹ 39,779. ಪತ್ನಿಯ ಪಿಂಚಣಿ ₹ 13,125. ನನ್ನ ಒಟ್ಟು ಠೇವಣಿ ₹ 6 ಲಕ್ಷ. ಆದಾಯ ತೆರಿಗೆ ರಿಟರ್ನ್ಸ್‌ ವಿಚಾರದಲ್ಲಿ ತಿಳಿಸಿ.

ಉತ್ತರ: ನಿಮ್ಮ ಹಾಗೂ ಹೆಂಡತಿಯ ಪಿಂಚಣಿ ಸೇರಿಸಿ ವಾರ್ಷಿಕ ನೀವು ₹ 6.34 ಲಕ್ಷ ಆದಾಯ ಪಡೆಯುತ್ತಿದ್ದೀರಿ. ಬ್ಯಾಂಕ್ ಠೇವಣಿ ಮೇಲೆ ₹ 40 ಸಾವಿರ ಬಡ್ಡಿ ಬರಬಹುದು. ಈ ಎರಡೂ ಸೇರಿ ನಿಮ್ಮ ವಾರ್ಷಿಕ ಆದಾಯ ₹ 6.74 ಲಕ್ಷವಾಗಲಿದೆ. ಸೆಕ್ಷನ್ 16 ಸ್ಟ್ಯಾಂಡರ್ಡ್‌ ಡಿಡಕ್ಷನ್‌ನಿಂದ ₹ 50 ಸಾವಿರ, ಸೆಕ್ಷನ್‌ 80ಟಿಟಿಬಿ ಯಿಂದ ಠೇವಣಿ ಬಡ್ಡಿ ₹ 40 ಸಾವಿರ ವಿನಾಯಿತಿ ಪಡೆದಾಗ ಅಂತಿಮ ಆದಾಯ ₹ 5.44 ಲಕ್ಷವಾಗಲಿದೆ. ನೀವು ಸೂಪರ್ ಸೀನಿಯರ್ ಆಗಿರುವುದರಿಂದ ₹ 5 ಲಕ್ಷ ದಾಟಿದ ಮೊತ್ತಕ್ಕೆ ಮಾತ್ರ ಶೇ 20 ಆದಾಯ ತೆರಿಗೆ ಕೊಡಬೇಕಾಗುತ್ತದೆ. ನೀವು ಐ.ಟಿ ರಿಟರ್ನ್ಸ್‌ ಕೂಡಾ ತುಂಬಬೇಕು. ನವೆಂಬರ್‌ ತನಕ ಸಮಯವಿದೆ.

***

- ತಿಮ್ಮಪ್ಪ, ಮೂಡಿಗೆರೆ

ವಯಸ್ಸು 81. ಪಿಂಚಣಿ ಹಾಗೂ ಬ್ಯಾಂಕ್‌ ಠೇವಣಿ ಬಡ್ಡಿ ಸೇರಿ ವಾರ್ಷಿಕ ₹ 4.39 ಲಕ್ಷ ಆದಾಯವಿದೆ. ತೆರಿಗೆ ರಿಟರ್ನ್ಸ್‌ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ನೀವು 80 ವರ್ಷ ದಾಟಿದ ಮೇಲೆ ಸೂಪರ್ ಸೀನಿಯರ್ ಸಿಟಿಜನ್ ಆಗಿರುವುದರಿಂದಲೂ ನಿಮ್ಮ ಒಟ್ಟು ಆದಾಯ ₹ 5 ಲಕ್ಷದೊಳಗೆ ಇರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಹಾಗೂ ಐ.ಟಿ ರಿಟರ್ನ್ಸ್ ತುಂಬುವ ಅವಶ್ಯಕತೆಯೂ ಇಲ್ಲ. ₹ 5 ಲಕ್ಷ ಆದಾಯ ದಾಟುವ ತನಕ ತೆರಿಗೆ ರಿಟರ್ನ್ಸ್‌ ಭಯವಿಲ್ಲದೆ ಆರಾಮಾಗಿ ಜೀವನ ಸಾಗಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT