ಬುಧವಾರ, ಮೇ 27, 2020
27 °C

ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ: ಐಎಂಎಫ್‌ ಮುಖ್ಯಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಎಎಫ್‌ಪಿ): ‘ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ. 2009ರಲ್ಲಿ ಇದ್ದಂತಹ ಸ್ಥಿತಿಗಿಂತಲೂ ಇದು ಕೆಟ್ಟದಾಗಿರಲಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯಾ ಅವರು ಎಚ್ಚರಿಕೆ ನೀಡಿದ್ದಾರೆ.

‘ಕೊರೊನಾ ವೈರಸ್‌ ಸೋಂಕು ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸಿನ ನೆರವು ಬೇಕಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಆರ್ಥಿಕ ಚಟುವಟಿಕೆಗಳು ದಿಢೀರನೆ ಸ್ಥಗಿತಗೊಂಡಿವೆ. ಇದರಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ₹185 ಲಕ್ಷ ಕೋಟಿಗಳಷ್ಟು ಹಣಕಾಸಿನ ನೆರವು ನೀಡಬೇಕಾಗಿದೆ. ಇದು ಕನಿಷ್ಠ ಮಟ್ಟದ ಅಂದಾಜಾಗಿದೆ. ಪ್ರವರ್ಧಮನಾಕ್ಕೆ ಬರುತ್ತಿರುವ ದೇಶಗಳು ಇತ್ತೀಚಿನ ವಾರಗಳಲ್ಲಿ ₹6.145 ಲಕ್ಷ ಕೋಟಿಗೂ ಅಧಿಕ ನಷ್ಟ ಅನುಭವಿಸಿವೆ. ಈ ನಷ್ಟ ತುಂಬಿಕೊಳ್ಳಲು ದೇಶಿ ವರಮಾನದ ಕೊರತೆಯೂ ಎದುರಾಗಿದೆ. ಈಗಾಗಲೇ ಕೆಲವು ದೇಶಗಳು ಭಾರಿ ಪ್ರಮಾಣದ ಸಾಲದ ಹೊರೆಯಲ್ಲಿ ಸಿಲುಕಿವೆ.

‘ಕಡಿಮೆ ಆದಾಯ ಇರುವ 80ಕ್ಕೂ ಅಧಿಕ ದೇಶಗಳಲ್ಲಿ ಬಹುತೇಕ ದೇಶಗಳು ಐಎಂಎಫ್‌ನಿಂದ ತುರ್ತು ನಿಧಿಗಾಗಿ ಬೇಡಿಕೆ ಸಲ್ಲಿಸಿವೆ’ ಎಂದು ಅವರು ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಾಷಿಂಗ್ಟನ್‌ ಮೂಲದ ಹಣಕಾಸು ಸಮಿತಿಯೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಅವರು, ಈಗಿರುವ ₹ 3.70 ಲಕ್ಷ ಕೋಟಿ ತುರ್ತು ನಿಧಿ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಅಮೆರಿಕ ಘೋಷಿಸಿರುವ ಪ್ಯಾಕೆಜ್‌ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು