‘ಎಲ್ಟಿ ಫುಡ್ಸ್’ ಕಂಪನಿಯ ಷೇರು ಮೌಲ್ಯವು ₹600ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಶೇ 19ರಷ್ಟು ವರಮಾನ ಏರಿಕೆಯನ್ನು ದಾಖಲಿಸಿದೆ.

ಕಂಪನಿಯ ಬೆಳವಣಿಗೆಯು ವಿಸ್ತೃತ ನೆಲೆಯಲ್ಲಿ ಆಗಿದೆ. ಭಾರತದಲ್ಲಿನ ವಹಿವಾಟುಗಳು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಶೇ 10ರಷ್ಟು ಬೆಳವಣಿಗೆ ಕಂಡಿವೆ. ಅದೇ ರೀತಿ ವಿದೇಶಿ ವಹಿವಾಟುಗಳ ಪ್ರಮಾಣವು ಶೇ 15ರಷ್ಟು ಏರಿಕೆ ಕಂಡಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

ಕಂಪನಿಯ ಸಾವಯವ ಉತ್ಪನ್ನಗಳ ಮಾರಾಟವು ಯುರೋಪ್ ಮತ್ತು ಅಮೆರಿಕದಲ್ಲಿನ ಬಲಿಷ್ಠ ವಿತರಣಾ ಜಾಲದ ಕಾರಣದಿಂದಾಗಿ ಹೆಚ್ಚಳ ಕಂಡಿದೆ. ಬ್ರಿಟನ್ನಿನಲ್ಲಿ ಈ ಬಗೆಯ ಉತ್ಪನ್ನಗಳ ಮಾರಾಟವು ಹೆಚ್ಚಳ ಕಾಣುತ್ತಿದೆ. ಎಲ್ಟಿ ಫುಡ್ಸ್ ಕಂಪನಿಯು ಎರಡಂಕಿ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಲು ಸಜ್ಜಾಗಿದೆ. ಕಂಪನಿಯ ತೆರಿಗೆ ನಂತರದ ಲಾಭದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು 2024–25ರಿಂದ 2026–27ರವರೆಗೆ ಶೇ 28ರಷ್ಟು ಆಗುವ ನಿರೀಕ್ಷೆ ಇದೆ ಎಂದು ಕೂಡ ಮೋತಿಲಾಲ್ ಓಸ್ವಾಲ್ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಎಲ್ಟಿ ಫುಡ್ಸ್ ಕಂಪನಿಯ ಷೇರುಮೌಲ್ಯವು ₹500.45 ಆಗಿತ್ತು.

(ಬ್ರೋಕರೇಜ್ ಸಂಸ್ಥೆಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.