ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾವೆಲ್ಲೆ ನೆಟ್‌ವರ್ಕ್ಸ್‌ನ ಶೇ 25ರಷ್ಟು ಷೇರು ಖರೀದಿಸಿದ ಏರ್‌ಟೆಲ್

Last Updated 31 ಜನವರಿ 2022, 15:45 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ನವೋದ್ಯಮ ಲ್ಯಾವೆಲ್ಲೆ ನೆಟ್‌ವರ್ಕ್ಸ್‌ನ ಶೇಕಡ 25ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಭಾರ್ತಿ ಏರ್‌ಟೆಲ್‌ ಕಂಪನಿಯು ಸೋಮವಾರ ತಿಳಿಸಿದೆ. ಈ ಒಪ್ಪಂದವು ಶಾಸನಬದ್ಧ ಅನುಮೋದನೆಗೆ ಒಳಪಟ್ಟಿರುತ್ತದೆ.

ಹೆಚ್ಚಿನ ಉದ್ಯಮಗಳು ಗ್ರಾಹಕರಿಗೆ ಕ್ಲೌಡ್‌ ಆಧಾರಿತ ಅಪ್ಲಿಕೇಷನ್‌ಗಳ ಮೂಲಕ ಸೇವೆ ನೀಡಲು ಮುಂದಾಗಿರುವುದರಿಂದ ಆನ್‌ ಡಿಮಾಂಡ್‌ ಮತ್ತು ವಿಶ್ವಾಸಾರ್ಹ ನೆಟ್‌ವರ್ಕ್‌ ಸಂಪರ್ಕದ ಅಗತ್ಯವಿದೆ. ಕ್ಲೌಡ್‌ ಅಧಾರಿತ ಐ.ಟಿ. ಸೇವೆಗಳನ್ನು ಪೂರೈಸಲು ಸಾಫ್ಟ್‌ವೇರ್‌ ಪರಿಹಾರಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT