ಏಪ್ರಿಲ್–ಜೂನ್ ಹಣಕಾಸು ತ್ರೈಮಾಸಿಕ ಕೊನೆಗೊಂಡಿದೆ. ಹೊಸ ತ್ರೈಮಾಸಿಕ ಶುರುವಾಗಿ ಎರಡು ವಾರಗಳು ಕಳೆದಿವೆ. ಜೂನ್ ತ್ರೈಮಾಸಿಕದಲ್ಲಿ ಷೇರುಪೇಟೆಗಳು ಎಷ್ಟು ಬೆಳೆದವು? ಮುಂದಿನ ತ್ರೈಮಾಸಿಕದಲ್ಲಿ ಏನಾಗಬಹುದು? ಯಾವೆಲ್ಲ ವಲಯಗಳ ಮೇಲೆ ಹೂಡಿಕೆದಾರರು ಗಮನ ಇರಿಸಬೇಕು? ಈ ಎಲ್ಲ ಸಂಗತಿಗಳ ಬಗ್ಗೆ ಈ ಬರಹವು ಪಕ್ಷಿನೋಟ ಹರಿಸಿದೆ

ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಂಡುಬಂದ ಕಾರಣಕ್ಕೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಷೇರುಪೇಟೆಯ ಗಳಿಕೆಯು ಚೆನ್ನಾಗಿಯೇ ಇತ್ತು. ದೇಶದ ಜಿಡಿಪಿ ಬೆಳವಣಿಗೆ ದರವು 2024–25ರ ಕೊನೆಯ ತ್ರೈಮಾಸಿಕದಲ್ಲಿ ಶೇಕಡ 7.5ಕ್ಕೆ ಜಿಗಿಯಿತು. ಇದು ಆರ್ಥಿಕ ಚಟುವಟಿಕೆ ಬಲಗೊಂಡಿರುವುದನ್ನು ಹೇಳುತ್ತಿದೆ.

ಸರ್ಕಾರದ ಕಡೆಯಿಂದ ಆಗುವ ವೆಚ್ಚಗಳು ಹೆಚ್ಚಾಗಿದ್ದುದು ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲು ಕಾರಣವಾದವು. ಇದು 2024–25ರ ಕೊನೆಯ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಲಾಭ ಗಳಿಕೆ ಹೆಚ್ಚಲೂ ನೆರವಾಯಿತು.

ಇದೇ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಕೆಲವು ಅಪಾಯಗಳು ಕೂಡ ಕಡಿಮೆಯಾದವು. ಪ್ರತಿಸುಂಕ ಜಾರಿಯನ್ನು 90 ದಿನ ಅಮಾನತಿನಲ್ಲಿ ಇರಿಸುವುದಾಗಿ ಅಮೆರಿಕವು ಏಪ್ರಿಲ್ನಲ್ಲಿ ಪ್ರಕಟಿಸಿತು. ಬೇರೆ ಬೇರೆ ದೇಶಗಳು ಈಗ ಅಮೆರಿಕದ ಜೊತೆ ನಡೆಸುತ್ತಿರುವ ವ್ಯಾಪಾರ ಒಪ್ಪಂದದ ಬಗ್ಗೆ ಬಂಡವಾಳ ಮಾರುಕಟ್ಟೆಯು ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದೆ. ದ್ವಿಪಕ್ಷೀಯ ಮಾತುಕತೆಗಳ ಮೂಲಕ ಎರಡೂ ಕಡೆಯವರಿಗೆ ಲಾಭ ಆಗುವಂತಹ ಒಪ್ಪಂದ ಸಾಧ್ಯವಾಗಬಹುದು ಎಂಬ ನಿರೀಕ್ಷೆ ಇದೆ.

ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ರೈಮಾಸಿಕದ ಕೊನೆಯ ಹೊತ್ತಿಗೆ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ತೀವ್ರತೆ ತಗ್ಗಿದ್ದು ಕೂಡ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು. ಕಚ್ಚಾ ತೈಲದ ಬೆಲೆಯು ಇಳಿಕೆ ಕಂಡಿತು, ಪೂರೈಕೆಯಲ್ಲಿನ ಅನಿಶ್ಚಿತತೆಗಳು ತಗ್ಗಿದವು. ಇವೆಲ್ಲ ಭಾರತದ ಕಾರ್ಪೊರೇಟ್ ವಲಯಕ್ಕೆ ಕೂಡ ಪೂರಕ. ಜಾಗತಿಕ ಹಾಗೂ ದೇಶಿ ರಿಸ್ಕ್ಗಳ ತೀವ್ರತೆಯು ಏಕಕಾಲದಲ್ಲಿ ಕಡಿಮೆ ಆಗಿದ್ದು ಭಾರತದ ಷೇರುಪೇಟೆ ಹೂಡಿಕೆದಾರರ ವಿಶ್ವಾಸ ವೃದ್ಧಿಸಿತು.

ಮೊದಲ ತ್ರೈಮಾಸಿಕದಲ್ಲಿ ನಿಫ್ಟಿ–50 ಸೂಚ್ಯಂಕವು ಶೇಕಡ 8.5ರಷ್ಟು ಏರಿಕೆ ಕಂಡಿದೆ. ವಿವಿಧ ವಲಯಗಳ ಕಂಪನಿಗಳನ್ನು ಪ್ರತಿನಿಧಿಸುವ ವಿಸ್ತೃತ ಮಾರುಕಟ್ಟೆಯು ಇದೇ ಅವಧಿಯಲ್ಲಿ ಶೇ 10.7ರಷ್ಟು ಏರಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವಿಸ್ತೃತ ಮಾರುಕಟ್ಟೆಯು ಶೇ 12ರಷ್ಟು ಇಳಿಕೆ ಕಂಡಿತ್ತು. ಈಗ ಹೂಡಿಕೆದಾರರು ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಗಳಿಕೆ ಹೇಗಿತ್ತು ಎಂಬುದರ ಕಡೆ, ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಕಡೆ ಗಮನ ಹರಿಸಿದ್ದಾರೆ.

2025–26ರಲ್ಲಿ ಕಂಪನಿಗಳ ಗಳಿಕೆಯು ಚೆನ್ನಾಗಿರಲಿದೆ ಎಂಬ ನಿರೀಕ್ಷೆಯು ದೇಶಿ ಮಾರುಕಟ್ಟೆಯಲ್ಲಿ ಬಲವಾಗಿದೆ. ಈ ವರ್ಷದಲ್ಲಿ ಭಾರತದ ಕಂಪನಿಗಳ ಇಪಿಎಸ್ (ಪ್ರತಿ ಷೇರಿನಿಂದ ಗಳಿಸುವ ಹಣ) ಪ್ರಮಾಣ ಶೇ 10–12ರಷ್ಟು ಹೆಚ್ಚಬಹುದು ಎಂಬ ನಿರೀಕ್ಷೆ ಇದೆ. ಆದರೆ ಮೊದಲ ತ್ರೈಮಾಸಿಕದಲ್ಲಿ ಇಪಿಎಸ್ ಹೆಚ್ಚಳವು ಶೇ 5–7ರಷ್ಟು ಮಾತ್ರ ಆಗಬಹುದು ಎಂಬ ಅಂದಾಜು ಇದೆ.

ರೆಪೊ ದರದಲ್ಲಿನ ಇಳಿಕೆ, ನಗದು ಹರಿವಿನ ಹೆಚ್ಚಳ, ದೇಶಿ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಚುರುಕು ಪಡೆದಿರುವುದು, ಹಣದುಬ್ಬರ ಪ್ರಮಾಣವು ಕಡಿಮೆ ಆಗುತ್ತಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದು ಬೆಳವಣಿಗೆಗೆ ಪೂರಕವಾಗಿ ಒದಗಿಬರುವ ಸಾಧ್ಯತೆ ಇದೆ. ಆದರೆ ಲಾರ್ಜ್ ಕ್ಯಾಪ್ ಕಂಪನಿಗಳ ವರಮಾನ ಗಳಿಕೆಯು ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಇರಲಿಕ್ಕಿಲ್ಲ. ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ವಲಯದ ಕಂಪನಿಗಳ ವರಮಾನ ಏರಿಕೆಯು ಶೇ 10ರಷ್ಟು ಆಗಬಹುದು ಎಂಬ ಅಂದಾಜು ಇದೆ.

ಲೇಖಕ ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥ

ಮುಂದೆ ಈ ವಲಯಗಳ ಮೇಲೆ ಇರಲಿ ಗಮನ...

l ಐ.ಟಿ: ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಮುನ್ನೋಟವು ಮಂದವಾಗಿದೆ. ಅಮೆರಿಕದಲ್ಲಿ ಐ.ಟಿ. ಸೇವೆಗಳ ಮೇಲಿನ ವೆಚ್ಚವು ಕಡಿಮೆ ಇರುವುದು ಇದಕ್ಕೆ ಕಾರಣ. 2025–26ರಲ್ಲಿ ವರಮಾನದ ಏರಿಕೆಯು ಶೇ 5ಕ್ಕಿಂತ ಕಡಿಮೆ ಇರಬಹುದು ಎಂದು ಈ ವಲಯದ ದೊಡ್ಡ ಕಂಪನಿಗಳು ಅಂದಾಜಿಸಿವೆ. ಮಧ್ಯಮ ಗಾತ್ರದ ಐ.ಟಿ. ಕಂಪನಿಗಳು ಹೊಸ ತಂತ್ರಜ್ಞಾನ ವನ್ನು ಅಳವಡಿಸಿಕೊಂಡು, ವೆಚ್ಚಗಳಲ್ಲಿ ನಿಯಂತ್ರಣ ಸಾಧಿಸಿ, ಲಾಭದ ಪ್ರಮಾಣ ಜಾಸ್ತಿ ಮಾಡಿಕೊಂಡು, ತಮ್ಮ ವರಮಾನ ಏರಿಕೆಯು ಹೆಚ್ಚಿನ ಪ್ರಮಾಣದಲ್ಲಿ ಆಗಬಹುದು ಎಂಬ ನಿರೀಕ್ಷೆಯಲ್ಲಿವೆ.

ಆದರೆ ಐ.ಟಿ. ವಲಯದ ಪರಿಸ್ಥಿತಿಯು ನಿಧಾನವಾಗಿ ಆಕರ್ಷಕವಾಗುವ ನಿರೀಕ್ಷೆ ಇದೆ. ಈಚೆಗೆ ಅನುಮೋದನೆ ಪಡೆದಿರುವ ಅಮೆರಿಕದ ಹಣಕಾಸು ಮಸೂದೆಯು ಅಲ್ಲಿ ಐ.ಟಿ. ವೆಚ್ಚಗಳಿಗೆ ನೆರವಾಗುವ ಸಾಧ್ಯತೆ ಇದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಮುಂದಿನ ದಿನಗಳಲ್ಲಿ ಬಡ್ಡಿ ದರ ಇಳಿಸುವ ವಿಚಾರವಾಗಿ ಒಮ್ಮತವೊಂದಕ್ಕೆ ಬರುತ್ತಿರುವಂತಿದೆ. ಐ.ಟಿ. ವಲಯದ ಷೇರುಗಳ ಬಗ್ಗೆ ಈಗ ಒಳ್ಳೆಯ ಮುನ್ನೋಟ ಇರದಿದ್ದರೂ, ಇವೆಲ್ಲದರ ಪರಿಣಾಮವಾಗಿ ಕಂಪನಿಗಳ ಫಲಿತಾಂಶವು ಗಟ್ಟಿಯಾಗಿ ಇರುವ ನಿರೀಕ್ಷೆ ಇದೆ. ಇದು ದೀರ್ಘಾವಧಿ ಹೂಡಿಕೆದಾರರಿಗೆ ಒಳ್ಳೆಯ ಸಂಗತಿ.

l ಬ್ಯಾಂಕ್: ಷೇರುಪೇಟೆಯ ಪ್ರಮುಖ ವಲಯ ಇದು. ಬ್ಯಾಂಕಿಂಗ್ ವಲಯದ ಮುನ್ನೋಟ ಸಕಾರಾತ್ಮಕವಾಗಿದೆ. ಬ್ಯಾಂಕುಗಳು ಸಾಲ ನೀಡಲು ಬೇಕಿರುವ ಹಣವನ್ನು ಒಗ್ಗೂಡಿಸುವ ವೆಚ್ಚವು ಕಡಿಮೆ ಆಗಿದೆ. ಇದಕ್ಕೆ ಪೂರಕವಾಗಿ ನಗದು ಮೀಸಲು ಅನುಪಾತ (ಸಿಆರ್ಆರ್) ತಗ್ಗಿಸಲಾಗಿದೆ. ವ್ಯವಸ್ಥೆಯಲ್ಲಿ ನಗದು ಹರಿವು ಹೆಚ್ಚಿದೆ. ಇವೆಲ್ಲವೂ ದೀರ್ಘಾವಧಿಯಲ್ಲಿ ಸಾಲ ನೀಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಆದರೆ, ಈ ವಲಯದ ಷೇರುಮೌಲ್ಯದಲ್ಲಿ ಈಚೆಗೆ ಕಂಡ ಜಿಗಿತವು, ಷೇರುಗಳನ್ನು ತುಸು ದುಬಾರಿ ಆಗಿಸಿದೆ. ಸಾಲದ ಮೇಲಿನ ಬಡ್ಡಿ ಕಡಿಮೆ ಆಗಿರುವುದು ಕಾರ್ಯಾಚರಣೆ ವರಮಾನವನ್ನು ಅಲ್ಪಾವಧಿಯಲ್ಲಿ ಕಡಿಮೆ ಮಾಡುವ ಸಾಧ್ಯತೆ ಇದೆ.

l ಮೂಲಸೌಕರ್ಯ: 2025–26ರಲ್ಲಿ ಸರ್ಕಾರದ ಕಡೆಯಿಂದ ಬಂಡವಾಳ ವೆಚ್ಚಗಳು ಹೆಚ್ಚಾಗಿರುವುದರಿಂದ ಮೂಲಸೌಕರ್ಯ ವಲಯವು ಆಕರ್ಷಣೆ ಪಡೆದುಕೊಂಡಿದೆ. ಈ ವಲಯದ ಷೇರುಗಳ ಮೌಲ್ಯವು ಸರಾಸರಿ ಮೌಲ್ಯಕ್ಕಿಂತ ಕಡಿಮೆ ಮಟ್ಟದಲ್ಲಿವೆ.

l ಗ್ರಾಹಕ ಬಳಕೆ: ಹಣದುಬ್ಬರ ಪ್ರಮಾಣವು ಇಳಿಕೆ ಕಂಡಿರುವುದರಿಂದ ಜನರ ಕೈಯಲ್ಲಿ ಖರ್ಚು ಮಾಡಲು ಹೆಚ್ಚು ಹಣ ಉಳಿಯುತ್ತಿದೆ. ಅಲ್ಲದೆ, ಆದಾಯ ತೆರಿಗೆ ಮಿತಿ ಹೆಚ್ಚಳ ಹಾಗೂ ಬಡ್ಡಿ ದರ ಇಳಿಕೆಯು ಕೂಡ ಪೂರಕವಾಗಿ ಒದಗಿಬಂದಿದೆ. ಇದರ ಪರಿಣಾಮವಾಗಿ ಗ್ರಾಹಕ ಬಳಕೆ ಉತ್ಪನ್ನಗಳ ವಲಯವು ಈ ವರ್ಷದಲ್ಲಿ ಪುಟಿದೇಳುವ ನಿರೀಕ್ಷೆ ಇದೆ.

ದೇಶಿ ಮಾರುಕಟ್ಟೆಯನ್ನು ಕೇಂದ್ರೀಕರಿಸಿಕೊಂಡಿರುವ ಎಫ್ಎಂಸಿಜಿ ವಲಯ, ಆಟೊಮೊಬೈಲ್, ಗ್ರಾಹಕ ಬಳಕೆ ಉತ್ಪನ್ನಗಳಿಗೆ ಹಣಕಾಸಿನ ನೆರವು ಒದಗಿಸುವ ವಲಯವು 2025–26ರಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಕುಟುಂಬಗಳ ಮಟ್ಟದಲ್ಲಿ ಆಗುವ ವೆಚ್ಚ ಏರಿಕೆ ಹಾಗೂ ಸರ್ಕಾರವು ಮಾಡುವ ವೆಚ್ಚಗಳಲ್ಲಿನ ಏರಿಕೆಯು ಈ ವಲಯಗಳಿಗೆ ಪೂರಕವಾಗಿ ಒದಗಿಬರಲಿವೆ.

l ಇಲ್ಲಿ ಅಸ್ಥಿರತೆ ಕಾಣಬಹುದು: ರಫ್ತನ್ನು ಹೆಚ್ಚಾಗಿ ಅವಲಂಬಿಸಿರುವ ಐ.ಟಿ., ಫಾರ್ಮಾ, ಬಿಡಿಭಾಗಗಳು, ಲೋಹ ವಲಯಗಳಲ್ಲಿ ಅಲ್ಪಾವಧಿಯಲ್ಲಿ ಹೆಚ್ಚು ಅಸ್ಥಿರತೆ ಇರಬಹುದು. ಬಂಡವಾಳ ಸರಕುಗಳು, ಇಂಧನ, ರಕ್ಷಣೆ, ಸಿಮೆಂಟ್ ಮತ್ತು ಕೈಗಾರಿಕಾ ವಲಯದ ಷೇರುಗಳ ಮೌಲ್ಯವು ದುಬಾರಿ ಆಗಿದೆ. ಈ ವಲಯಗಳ ಷೇರುಗಳು ಈ ವರ್ಷದಲ್ಲಿ ಹೆಚ್ಚಿನ ಗಳಿಕೆ ತಂದುಕೊಡಲಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.