ಸಿಟಿ ಯೂನಿಯನ್ ಬ್ಯಾಂಕ್ನ ಷೇರು ಮೌಲ್ಯವು ₹295ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಆನಂದ್ ರಾಠಿ ಹೇಳಿದೆ. ಸಿಟಿ ಯೂನಿಯನ್ ಬ್ಯಾಂಕ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ವರಮಾನ ಕಂಡಿದೆ. ಬ್ಯಾಂಕ್ನ ಸಾಲ ನೀಡಿಕೆ ಪ್ರಮಾಣವು ಶೇಕಡ 18.7ರಷ್ಟು ಹೆಚ್ಚಾಗಿದ್ದು, ಆರೋಗ್ಯಕರ ಮಟ್ಟದಲ್ಲಿದೆ ಎಂದು ಬ್ರೋಕರೇಜ್ ಕಂಪನಿ ಹೇಳಿದೆ.

ಎಂಎಸ್ಎಂಇ ವಲಯದಲ್ಲಿ ಸಾಲ ನೀಡಿಕೆ ಪ್ರಮಾಣವು ಹೆಚ್ಚಳ ಕಂಡಿದೆ, ಬ್ಯಾಂಕ್ನ ಹಣಕಾಸಿನ ಸ್ಥಿತಿ ಚೆನ್ನಾಗಿದೆ ಎಂದು ಅದು ಹೇಳಿದೆ. ಮುಂದಿನ ದಿನಗಳಲ್ಲಿ ಸಾಲ ನೀಡಿಕೆ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ ಹಾಗೂ ಸಾಲ ನೀಡಿಕೆಯ ಮೇಲಿನ ವೆಚ್ಚವು ಸಮಾಧಾನಕರ ಮಟ್ಟದಲ್ಲಿರುವ ಸಾಧ್ಯತೆ ಇದೆ ಎಂದೂ ಬ್ರೋಕರೇಜ್ ಕಂಪನಿ ಹೇಳಿದೆ. ಬ್ಯಾಂಕ್ನ ಷೇರು ಮೌಲ್ಯವು ಮಂಗಳವಾರದ ವಹಿವಾಟಿನ
ಅಂತ್ಯಕ್ಕೆ ₹254.60 ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.