ನವದೆಹಲಿ: ನಿಫ್ಟಿಯಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ 50 ಕಂಪನಿಗಳ ಗುಚ್ಛಕ್ಕೆ (ನಿಫ್ಟಿ 50) ಮಾರ್ಚ್ 28ರಂದು, ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಹಾಗೂ ಜೊಮಾಟೊ ಕಂಪನಿಯು ಅಧಿಕೃತವಾಗಿ ಸೇರ್ಪಡೆಯಾಗಲಿವೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ತಿಳಿಸಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಹಾಗೂ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ನ ಮಾರುಕಟ್ಟೆ ಬಂಡವಾಳ ಮೌಲ್ಯ (ಎಂ–ಕ್ಯಾಪ್) ಕಡಿಮೆಯಾಗಿದೆ. ಹಾಗಾಗಿ, ಈ ಸ್ಥಾನಕ್ಕೆ ಜಿಯೊ ಫೈನಾನ್ಶಿಯಲ್ ಮತ್ತು ಜೊಮಾಟೊ ಸೇರ್ಪಡೆಯಾಗುತ್ತಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಈ ಎರಡು ಕಂಪನಿಗಳ ಎಂ–ಕ್ಯಾಪ್ ಒಂದೂವರೆ ಪಟ್ಟು ಹೆಚ್ಚಳವಾಗಿದೆ.

ಜೊಮಾಟೊ ₹1.69 ಲಕ್ಷ ಕೋಟಿ ಹಾಗೂ ಜಿಯೊ ಫೈನಾನ್ಶಿಯಲ್ ಎಂ–ಕ್ಯಾಪ್ ₹1.04 ಲಕ್ಷ ಕೋಟಿ ಇದೆ. ಬಿಪಿಸಿಎಲ್ ₹60,928 ಕೋಟಿ ಹಾಗೂ ಬ್ರಿಟಾನಿಯಾ ₹64,151 ಕೋಟಿ ಎಂ–ಕ್ಯಾಪ್ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.