ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ವಹಿವಾಟು: ಸತತ ಮೂರನೇ ದಿನವೂ ಸೆನ್ಸೆಕ್ಸ್ ಏರಿಕೆ

Published 18 ಮೇ 2024, 14:17 IST
Last Updated 18 ಮೇ 2024, 14:17 IST
ಅಕ್ಷರ ಗಾತ್ರ

ಮುಂಬೈ: ವಿದೇಶಿ ಸಾಂಸ್ಥಿಕ ಬಂಡವಾಳದ ಒಳಹರಿವಿನ ಹೆಚ್ಚಳದಿಂದಾಗಿ ಶನಿವಾರ ನಡೆದ ವಿಶೇಷ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಸತತ ಮೂರನೇ ದಿನವೂ ಏರಿಕೆ ದಾಖಲಿಸಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 88 ಅಂಶ (ಶೇ 0.12ರಷ್ಟು) ಏರಿಕೆ ಕಂಡು, 74,005 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 245 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 35 ಅಂಶ ಏರಿಕೆ (ಶೇ 0.16ರಷ್ಟು) ಕಂಡು, 22,502 ಅಂಶಗಳಲ್ಲಿ ವಹಿವಾಟು ಸ್ಥಿರಗೊಂಡಿತು. 

ಈಕ್ವಿಟಿ ಹಾಗೂ ಈಕ್ವಿಟಿ ಉತ್ಪನ್ನ ವಿಭಾಗದಲ್ಲಿ ಎದುರಾಗಬಹುದಾದ ಅಡೆತಡೆ ಅಥವಾ ವೈಫಲ್ಯಗಳನ್ನು ಎದುರಿಸುವುದಕ್ಕೆ ಸಿದ್ಧವಾಗಿರುವಿಕೆಗೆ ಸಂಬಂಧಿಸಿದಂತೆ  ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಬಿಎಸ್‌ಇಯಿಂದ ವಿಶೇಷ ವಹಿವಾಟು ನಡೆಯಿತು. 

ಈ ವಿಶೇಷ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹4.12 ಲಕ್ಷ ಕೋಟಿ ಹೆಚ್ಚಳವಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.

ಸೆನ್ಸೆಕ್ಸ್ ಗುಚ್ಛದಲ್ಲಿ ನೆಸ್ಲೆ ಇಂಡಿಯಾ, ಪವರ್‌ ಗ್ರಿಡ್‌, ಟಾಟಾ ಮೋಟರ್ಸ್‌, ಟಿಸಿಎಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಹಿಂದುಸ್ತಾನ್ ಯೂನಿಲಿವರ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್, ಮಹೀಂದ್ರ ಆ್ಯಂಡ್‌ ಮಹೀಂದ್ರ, ಮಾರುತಿ ಸುಜುಕಿ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಶುಕ್ರವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,616 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆಯ ಅಂಕಿ–ಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT