ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣ ಇಳಿಕೆ: ಎರಡು ತಿಂಗಳ ಗರಿಷ್ಠಕ್ಕೆ ನಿಫ್ಟಿ

Last Updated 18 ಮೇ 2021, 8:29 IST
ಅಕ್ಷರ ಗಾತ್ರ

ಮುಂಬೈ:ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆ ಕಂಡುಬರುತ್ತಿದೆ. ಸತತ ಎರಡನೇ ದಿನವೂ ಮೂರು ಲಕ್ಷದ ಆಸುಪಾಸಿನಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 50 ಕಳೆದ ಎರಡು ತಿಂಗಳ ಗರಿಷ್ಠಕ್ಕೆ ತಲುಪಿದೆ.

ಹಣಕಾಸು ಮತ್ತು ಲೋಹದ ಷೇರುಗಳು ಹೆಚ್ಚಿನ ವಹಿವಾಟು ನಡೆಸಿದ್ದರಿಂದ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 202.75 ಅಂಶಗಳ ಏರಿಕೆಯೊಂದಿಗೆ 15,125.90 ದಾಖಲಿಸಿದೆ. ಬ್ಯಾಂಕಿಂಗ್, ಹಣಕಾಸು ಮತ್ತು ಲೋಹದ ಕಂಪನಿಗಳ ಷೇರು ಮೌಲ್ಯ ಏರಿಕೆ ಕಂಡಿರುವುದು ನಿಫ್ಟಿ ಏರಿಕೆಗೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ), 723.31 ಅಂಶಗಳ ಏರಿಕೆಯೊಂದಿಗೆ 50,304.04ರಲ್ಲಿ ಸ್ಥಿರವಾಗಿದೆ.

ಕೋವಿಡ್ ಪ್ರಕರಣ ಇಳಿಕೆ ಸುದ್ದಿ ಷೇರು ಮಾರುಕಟ್ಟೆಗೆ ಹುರುಪು ನೀಡಿದ್ದು, ಮಂಗಳವಾರ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.

ಖಾಸಗಿ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಾದ ಎಚ್‌ಡಿಎಫ್‌ಸಿ ಶೇ 2.34 ಏರಿಕೆ ದಾಖಲಿಸಿದರೆ, ಐಸಿಐಸಿಐ ಬ್ಯಾಂಕ್ ಶೇ 1.9 ಏರಿಕೆ ಕಂಡಿದೆ. ಮಾರ್ಚ್ 12ರ ಬಳಿಕ ಇದು ಗರಿಷ್ಠ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT