ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾರುಕಟ್ಟೆ ಮೇಲೆ ವಿವಿಧ ವಿದ್ಯಮಾನಗಳ ಪ್ರಭಾವ?

Published 15 ಅಕ್ಟೋಬರ್ 2023, 15:36 IST
Last Updated 15 ಅಕ್ಟೋಬರ್ 2023, 15:36 IST
ಅಕ್ಷರ ಗಾತ್ರ

ನವದೆಹಲಿ: ಎರಡನೇ ತ್ರೈಮಾಸಿಕದ ವರಮಾನ, ಕಚ್ಚಾ ತೈಲದ ಪೂರೈಕೆ, ಮಧ್ಯ ಪ್ರಾಚ್ಯದ ಅನಿಶ್ಚಿತ ಸ್ಥಿತಿಯು ದೇಶೀಯ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ. 

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಗಳು ಕೂಡ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. 

ವಿದೇಶಿ ಹೂಡಿಕೆದಾರರು ಈ ತಿಂಗಳಲ್ಲಿ ಷೇರು ಮಾರುಕಟ್ಟೆಯಿಂದ ₹9,800 ಕೋಟಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಅಮೆರಿಕದ ಬಾಂಡ್‌ ಲಾಭದಲ್ಲಿ ಆಗಿರುವ ಹೆಚ್ಚಳ ಮತ್ತು ಇಸ್ರೇಲ್‌–ಹಮಾಸ್‌ ಸಂಘರ್ಷವು ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂದಕ್ಕೆ ಪಡೆಯಲು ಮುಖ್ಯ ಕಾರಣವಾಗಿವೆ. 

ಮಾರುಕಟ್ಟೆಯು ಕಳೆದ ವಾರದಲ್ಲಿ ಹೆಚ್ಚಿನ ಏರಿಳಿತ ಕಂಡಿದೆ ಮತ್ತು ಅತಿಯಾಗಿ ಚಂಚಲವಾಗಿಯೂ ಇತ್ತು. ಹಾಗಿದ್ದರೂ ವಾರದ ಕೊನೆಯ ಹೊತ್ತಿಗೆ ಸಕಾರಾತ್ಮಕವಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಳವು ಇದಕ್ಕೆ ಕಾರಣವಾಗಿತ್ತು. ಮುಂಬೈ ಷೇರು ಮಾರುಕಟ್ಟೆಯು ಕಳೆದ ವಾರ ಶೆ 287.11 ಅಂಶ ಅಥವಾ ಶೇ 0.43ರಷ್ಟು ಏರಿಕೆ ಕಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT